ಮೈಸೂರು,ಡಿಸೆಂಬರ್,14,2020(www.justkannada.in): ಸಾರಿಗೆ ನೌಕರರ ಮುಷ್ಕರದಿಂದ ಕಳೆದ ಎರಡು ದಿನಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಂದ್ ಆಗಿದ್ದ ಬಸ್ ಸಂಚಾರ ಇದೀಗ ಆರಂಭವಾಗಿದೆ.
ಮೈಸೂರಿನಿಂದ ಕ್ಯಾಲಿಕ್ಯಾಟ್ ಹಾಗೂ ಬೆಂಗಳೂರು ಬಸ್ ಸಂಚರಿಸುತ್ತಿವೆ. ಸಿಬ್ಬಂದಿಗಳು ನಿಧಾನವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಈ ಹಿನ್ನೆಲೆ ಮೈಸೂರಿನಿಂದ ಜಿಲ್ಲಾ ಕೇಂದ್ರಗಳಿಗೂ ಬಸ್ ಸಂಚಾರ ಆರಂಭವಾಗಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಎಸ್ಕಾರ್ಟ್ ಜೊತೆ ಬಸ್ ಸಂಚಾರ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಬಸ್ ಸಂಚಾರ ಆರಂಭಗೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ ನಿಲ್ದಾಣದತ್ತ ಆಗಮಿಸುತ್ತಿದ್ದು ಬೆಂಗಳೂರಿನ ಕಡೆಗೆ ಹೆಚ್ಚಿನ ಪ್ರಯಾಣಿಕರು ಸಂಚಸಿರುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರ ಅಂತ್ಯವಾಗುವ ಬಗ್ಗೆ ಮಾಹಿತಿ ಇದೆ ಎಂದು ಈಗಾಗಲೇ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
english summary….
Bus services resumes in Mysuru amidst tight police security
Mysuru, Dec. 14, 2020 (www.justkannada.in): Bus services that were stopped from the last two days due to transport department employees protest resumed today in Mysuru City.
Bus services from Mysuru to Calicut and Bengaluru resumed today. The employees are returning to duty following the resuming of bus services from Mysuru to all other places, amidst tight police security.
Keywords: Bus services resume/ Bengaluru/ Calicut
Key words: Bus – starts – Mysore-police -security