ಶಿಕ್ಷಣದಲ್ಲಿ ಉತ್ಕೃಷ್ಟತೆ, ಉದ್ಯಮದೊಂದಿಗೆ ಪಾಲುದಾರಿಕೆಗೆ ಉದ್ಯಮ ಸಂವಹನ ಕೇಂದ್ರ ಸಹಕಾರಿ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಡಿಸೆಂಬರ್,08,2020(www.justkannada.in) : ವಿಶ್ವವಿದ್ಯಾಲಯವು ಕೈಗಾರಿಕಾ ಸಂವಹನಕ್ಕೆ ಸಹಕಾರಿಯಾಗಿ ಕಾರ್ಯನಿರ್ವಹಿಸಲು ವಿವಿಯಲ್ಲಿ ಉದ್ಯಮ ಸಂವಹನ ಕೇಂದ್ರವನ್ನು ಸ್ಥಾಪಿಸಿದ್ದು, ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಉದ್ಯಮದೊಂದಿಗೆ ಪಾಲುದಾರಿಕೆ ಮಾಡುವುದು ಇದರ ದೃಷ್ಟಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.logo-justkannada-mysoreಮೈಸೂರು ವಿಶ್ವವಿದ್ಯಾಲಯ ಉದ್ಯಮ ಸಂವಹನ ಕೇಂದ್ರ ಹಾಗೂ ನಾಸ್ಕಾಮ್ ಸಹಯೋಗದೊಂದಿಗೆ ವಿಜ್ಞಾನಭವನದಲ್ಲಿ ಆಯೋಜಿಸಿದ್ದ ಭವಿಷ್ಯದ ಕೌಶಲ್ಯಗಳ ವರ್ಚುವಲ್ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಉದ್ಯಮದ ಸ್ಪರ್ಧಾತ್ಮಕತೆ ಹಾಗೂ ಶಿಕ್ಷಣ ತಜ್ಞರು ಮತ್ತು ಕೈಗಾರಿಕೋದ್ಯಮಿಗಳಿಗೆ ಪರಸ್ಪರ ಅವಕಾಶಗಳನ್ನು ಒದಗಿಸುವ ಕಾರ್ಯವನ್ನು ವೇಗವಾಗಿ ನಿರ್ವಹಿಸುವುದು ಈ ಕೇಂದ್ರದ ಉದ್ದೇಶವಾಗಿದೆ ಎಂದರು.

Business-Communication-Center-Excellence-Education-Partnership-with-Business-Chancellor- Prof.G.Hemant Kumar

ಭವಿಷ್ಯದ ಕೌಶಲ್ಯಗಳ ಕುರಿತು ನಾಸ್ಕಾಮ್ ನೊಂದಿಗೆ ಮೊದಲ ಚರ್ಚೆಯಾಗಿದೆ. ಭಾರತದ ಹಳೆಯ ವಿವಿಗಳಲ್ಲಿ ಮೈಸೂರು ವಿವಿ ಒಂದಾಗಿದ್ದು, 2020 ಈ ವರ್ಷ ಶತಮಾನೋತ್ಸವವನ್ನು ಆಚರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಘಟಿಕೋತ್ಸವ ಭಾಷಣ ಮಾಡಿದರು ಎಂದು ನೆನೆದರು.

ರಾಜ್ಯದಲ್ಲಿ ಶೈಕ್ಷಣಿಕ ಬಹು ಮಾಧ್ಯಮ ಕೇಂದ್ರವನ್ನು ಆರಂಭಿಸಲು ಇ-ಆಡಳಿತ ಉಪಕ್ರಮಗಳು ವಿದ್ಯಾರ್ಥಿಗಳ ಪ್ರವೇಶ, ಪರೀಕ್ಷೆ ಕುರಿತು ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಕ್ರಮಕೈಗೊಂಡಿದೆ. ಉದ್ಯಮ ಸಂವಹನ ಕೇಂದ್ರವು ಉದ್ಯೋಗವಕಾಶದ ಮಾಹಿತಿ ಒದಗಿಸುವ ಜೊತೆಗೆ ಶಿಕ್ಷಣ ತಜ್ಞರು ಮತ್ತು ಕೈಗಾರಿಕೋದ್ಯಮಿಗಳಿಗೆ ಪರಸ್ಪರ ಅವಕಾಶಗಳ ಒದಗಿಸಲು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.

Business-Communication-Center-Excellence-Education-Partnership-with-Business-Chancellor- Prof.G.Hemant Kumar
ತರಬೇತಿ, ಸಂಶೋಧನೆ ಮತ್ತು ಸಲಹಾ ಕಾರ್ಯಗಳ ಉತ್ತೇಜಿಸಲು ವಿಶ್ವವಿದ್ಯಾಲಯವು ಭಾರತೀಯ ಉದ್ಯಮದ ಒಕ್ಕೂಟ (ಸಿಐಐ) ಮತ್ತು ನಾಸ್ಕಾಮ್ ಸದಸ್ಯತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ನಾಸ್ಕಾಮ್ ಪ್ರೈಮ್ ಹೆಡ್ ಪ್ಯೂಚರ್ ಸ್ಕಿಲ್ಸ್ ಕೀರ್ತಿ ಸೇತ್, ವೆಂಕಟರಾಮನ್ ಉಮಕಾಂತ್, ಕಲಿಕೆ ಮತ್ತು ಅಭಿವೃದ್ದಿ ಕಾರ್ಯತಂತ್ರದ ಸಲಹೆಗಾರರಾದ ಜಯಶ್ರೀ, ಶ್ರೀದೇವಿ ಸಿರಾ, ಪ್ರೊ.ಎ.ಬಾಲಸುಬ್ರಮಣಿಯನ್ ಇತರರು ಭಾಗವಹಿಸಿದ್ದರು.

English summary….

“The Industry Interaction Center has been established to function as a bridge between the University and Industry. The major objective of the center is to work to establish partnerships with industries to achieve excellence in higher education,” opined Prof. G. Hemanth Kumar, Vice-Chancellor, Mysore University.
He inaugurated a virtual interaction programme on the topic ‘Future Skills’, held at the Vignana Bhavana, organized by the Industry Interaction Centre, Mysore University today.Business-Communication-Center-Excellence-Education-Partnership-with-Business-Chancellor- Prof.G.Hemant Kumar
“The University administrative board has taken measures to establish Multi-Medium Educational Centre in the State, to start e-administrative measures for admission of students and conducting examinations. Along with providing information on job opportunities, the Industry Interaction Center will function as a catalyst in providing mutual opportunities to education experts and industrialists,” he explained.

key words : Business-Communication-Center-Excellence-Education-Partnership-with-Business-Chancellor- Prof.G.Hemant Kumar