ಉದ್ಯಮಿ ಸಿದ್ಧಾರ್ಥ್ ನಾಪತ್ತೆ ಹಿನ್ನೆಲೆ: ಶೋಧ ಕಾರ್ಯಕ್ಕಾಗಿ ಕದಂಬ ನೌಕಾನೆಲೆಯಿಂದ ನೌಕಾ ನೆಲೆ ತಂಡ ರವಾನೆ…

ಕಾರವಾರ,ಜು,30,2019(www.justkannada.in):  ನಿಗೂಢವಾಗಿ ನಾಪತ್ತೆಯಾಗಿರುವ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಕಾಫಿಡೇ ಸ್ಥಾಪಕ ಸಿದ್ಧಾರ್ಥ್ ಪತ್ತೆಗಾಗಿ ನೇತ್ರವತಿ ನದಿಯಲ್ಲಿ ಶೋಧಕಾರ್ಯ ನಡೆಯುತ್ತಿದೆ.

ಈ ನಡುವೆ ಶೋಧಕಾರ್ಯಕ್ಕಾಗಿ ಕಾರವಾರ ಕದಂಬ ನೌಕಾನೆಲೆಯಿಂದ ನೌಕಾ ನೆಲೆ ತಂಡ ರವಾನೆ ಮಾಡಲಾಗಿದೆ. ನೇತ್ರಾವತಿ ನದಿಯಲ್ಲಿ ಕರಾವಳಿ ಪಡೆ, ಮುಳುಗು ತಜ್ಞರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಮುದ್ರದಲ್ಲಿ ಹೋವರ್ ಕ್ರಾಫ್ಟ್ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದೆ. ಸತತ ಹುಡುಕಾಟದ ನಡುವೆಯೂ ಈವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ

ಹೀಗಾಗಿ ಕದಂಬ ನೌಕನೆಲೆಯಿಂದೆ ಎರಡು ಜಮಿನಿ ಸರ್ಚಿಂಗ್ ಬೋಟ್ ಎಂಟು ಜನರ ಡೈವಿಂಗ್ ಅಸಿಸ್ಟೆಂಟ್ ತಂಡ ರವಾನೆ ಮಾಡಲಾಗಿದೆ.  ಈ ತಂಡ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಸಲಿದೆ.  ಸಿದ್ದಾರ್ಥ್ ಅವರು ನಾಪತ್ತೆಯಾಗಿರುವ ಸ್ಥಳದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನೇತ್ರಾವತಿ ನದಿ ಸೇರಿ ವಿವಿಧ ಕಡೆಗಳಲ್ಲಿ ಎನ್ ಡಿಆರ್ ಎಫ್ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಯುತ್ತಿದೆ.  ಇನ್ನು ಮತ್ತೆ ರಾತ್ರಿ ಹೋವರ್ ಕ್ರಾಫ್ಟ್ ಶೋಧ ಕಾರ್ಯ ಆರಂಭಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

Key words: Businessman- Siddharth – Kadamba -Shipyard – Naval Base -Team -Transmission