ಮೈಸೂರು,ಡಿಸೆಂಬರ್,23,2020(www.justkannada.in): ಮೈಸೂರಿನ ದೇವರಾಜ ಮಾರುಕಟ್ಟೆಗೆ ಬರೊಬ್ಬರಿ 250 ಕೆಜಿ ತೂಕದ ದೈತ್ಯ ಬಟರ್ ಫಿಶ್ ಅನ್ನ ತರಿಸಲಾಗಿದ್ದು, ದೈತ್ಯ ಬಟರ್ ಫಿಶ್ ನೋಡಲು ಜನರು ಮುಗಿಬಿದ್ದ ದೃಶ್ಯ ಕಂಡು ಬಂದಿತು.
ಅರಬ್ಬಿ ಸಮುದ್ರದಲ್ಲಿ ಸೆರೆ ಸಿಕ್ಕ ಈ ದೈತ್ಯ ಮೀನನ್ನ ಕೇರಳದ ಕ್ಯಾಲಿಕಟ್ ನಿಂದ ಮೈಸೂರಿಗೆ ತರಿಸಲಾಗಿದೆ. ಬರೊಬ್ಬರಿ 1 ಲಕ್ಷ ಮೌಲ್ಯದ ಈ ಬಟರ್ ಫಿಶ್ ಸುಮಾರು 250 ಕೆಜಿ ತೂಕವನ್ನ ಹೊಂದಿದೆ ಎನ್ನಲಾಗಿದೆ.
ಇನ್ನು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನದೀಮ್ ಎಂಬುವವರು ಈ ದೈತ್ಯ ಮೀನನ್ನ ಮೈಸೂರಿಗೆ ತರಿಸಿದ್ದಾರೆ. ಸದ್ಯ ಈ ಮೀನು ನಗರದ ದೇವರಾಜ ಮಟನ್ ಮಾರುಕಟ್ಟೆಯ ಸೀ ಫಿಸ್ ವರ್ಲ್ಡ್ ಫಿಸ್ ಅಂಗಡಿಯಲ್ಲಿದ್ದು, ಈ ದೈತ್ಯ ಮೀನನ್ನ ನೋಡಲು ಜನರು ಮುಗಿಬಿದ್ದಿದ್ದಾರೆ.
Key words butterfish -250kg- came – Devaraja market – Mysore.