ಉಪಚುನಾವಣೆ: ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್ ನಿರ್ಧಾರ- ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್,15,2024 (www.justkannada.in):  ಚನ್ನಪಟ್ಟಣ ಉಪ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಯಾರು ಅಭ್ಯರ್ಥಿ ಆಗುತ್ತಾರೆ ಎಂಬುವುದನ್ನ ಪಕ್ಷದ ವರಿಷ್ಠರು, ಹೈಕಮಾಂಡ್ ನಿರ್ಧರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ  ಯತೀಂದ್ರ ಸಿದ್ದರಾಮಯ್ಯ, ಉಪಚುನಾವಣೆಗೆ ನಾವು ಪ್ರಚಾರಕ್ಕೆ ಹೋಗುತ್ತೇವೆ. ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇವೆ. ಇಂತಹವರೇ ಅಭ್ಯರ್ಥಿ ಆಗಬೇಕು ಅಂತ ನಾನೇನು ಹೇಳಲ್ಲ. ಯಾರೇ ಆದರೂ ಗೆಲ್ಲಿಸಿಕೊಂಡು ಬರುವ ನಿಟ್ಟಿಲ್ಲ ಕೆಲಸ ಮಾಡುತ್ತವೆ ಎಂದರು.

ಮುಡಾ ಅಧ್ಯಕ್ಷ  ಮರೀಗೌಡ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ  ಡಾ.ಯತೀಂದ್ರ ಸಿದ್ದರಾಮಯ್ಯ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ  ಆದರೆ, ಮುಡಾದಲ್ಲಿ ನಡೆದಿರುವ ಅವ್ಯವಸ್ಥೆ, ಅವ್ಯವಹಾರವನ್ನ ಸ್ವಚ್ಚ ಮಾಡುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಮಾಡಿದೆ. ಅದಕ್ಕಾಗಿ ಈಗಾಗಲೇ ಪಿ.ಎನ್.‌ ದೇಸಾಯಿ ಆಯೋಗ ರಚನೆ ಮಾಡಿದೆ. ಮುಂದಿನ ದಿನಗಳಲ್ಲಿ ಮುಡಾದಲ್ಲಿ ಅವ್ಯವಹಾರ ಆಗದಂತೆ ನೋಡಿಕೊಳ್ಳಲು ಸರ್ಕಾರ ಬದ್ದವಾಗಿದೆ ಎಂದರು.

Key words: By-election,  High Command, decision, candidates, Yatindra Siddaramaiah