ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ: ರಾಜ್ಯದಲ್ಲಿರೋದು ದರಿದ್ರ ಕಾಂಗ್ರೆಸ್ ಸರ್ಕಾರ- ಬಿವೈ ವಿಜಯೇಂದ್ರ ಕಿಡಿ

ಬೆಂಗಳೂರು,ಮಾರ್ಚ್,20,2025 (www.justkannada.in): ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಶಾಕ್ ನೀಡಿರುವ  ಕೆಇಆರ್ ಸಿ 36 ಪೈಸೆ ವಿದ್ಯುತ್ ದರ ಏರಿಕೆಗೆ ಆದೇಶ ಹೊರಡಿಸಿದ್ದು ಈ ಸಂಬಂಧ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.

ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ,  ಸರ್ಕಾರ ಜನರಿಗೆ ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟಿದೆ . ಗ್ಯಾರಂಟಿ ವೈಪಲ್ಯ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ ಫ‍್ರೀ ವಿದ್ಯುತ್ ಅಂತಾರೆ ಜನರಿಗೆ ದರ ಏರಿಕೆಯ ಬರೆ ಎಳೆಯುತ್ತಾರೆ. ರಾಜ್ಯದಲ್ಲಿರೋದು ದರಿದ್ರ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದರು.

ವಿಧಾನಸಭೆಯಲ್ಲಿ ನಾವು ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಸರ್ಕಾರದ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

Key words: Guarantee, price hike, Congress government, BY Vijayendra