ಬೆಂಗಳೂರು,ಮಾರ್ಚ್,21,2025 (www.justkannada.in): ಸ್ಪೀಕರ್ ಪೀಠಕ್ಕೆ ಅಗೌರವ ತಂದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನ ಸದನದಿಂದ 6 ತಿಂಗಳು ಅಮಾನತು ಮಾಡಿರುವ ಸ್ಪೀಕರ್ ಯುಟಿ ಖಾದರ್ ಅವರ ನಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಶಾಸಕರಿಗೆ ರಕ್ಷಣೆ ಕೊಡುವ ಕರ್ತವ್ಯ ಇತ್ತು. ಸಿಎಂ ಸ್ಪೀಕರ್ ಗೆ ರಕ್ಷಣೆ ಕೊಡುವ ಕರ್ತವ್ಯ. ನಾವು ಸಚಿವರ ಪರವಾಗಿ ಹೋರಾಡಿದ್ದೇವೆ. ಸಚಿವರ ಪರ ಪ್ರತಿಭಟನೆ ಮಾಡಿದರೇ ನಮ್ಮ ಶಾಸಕರನ್ನ ಹೊರ ಹಾಕಿದ್ದಾರೆ. ನಮ್ಮ ಶಾಸಕರನ್ನ ಅಮಾನತು ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ನಡೆ ಎಂದು ಕಿಡಿಕಾರಿದರು.
Key words: BJP MLA’s, suspension, Anti-democratic, BY Vijayendra