ಆ ಶಾಸಕರೇನು ಭಯೋತ್ಪಾದಕರಾ ಅಥವಾ ನಕ್ಸಲರಾ? ಅಮಾನತು ಆದೇಶ ಹಿಂಪಡೆಯುವಂತೆ ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು,ಮಾರ್ಚ್,22,2025 (www.justkannada.in): ಸ್ಪೀಕರ್  ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಸದನದಿಂದ 6 ತಿಂಗಳ ಕಾಲ  18 ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಆದೇಶವನ್ನ ಹಿಂಪಡೆಯುವಂತೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಆರು ತಿಂಗಳ ಕಾಲ ಶಾಸಕರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ, ಅಸಂವಿಧಾನತ್ಮಕ, ಏಕಪಕ್ಷೀಯ ಹಾಗೂ ಮನಸೋ ಇಚ್ಚೆಯಿಂದ ತೆಗೆದುಕೊಂಡ ನಿರ್ಧಾರವಾಗಿದೆ. ಯಾವ ಕಾರಣಕ್ಕಾಗಿ ಸ್ಪೀಕರ್ ಅಮಾನತು ಮಾಡುವ‌ ನಿರ್ಧಾರ ಮಾಡಿದರು ಎಂದು ಪ್ರಶ್ನಿಸಿದರು.

ಸದನದಲ್ಲಿ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ನಡೆಯ ವಿರುದ್ಧ ನಾವು ಹೋರಾಟ ಮಾಡುತ್ತಿದ್ದವು. ಆದರೆ ಸ್ಪೀಕರ್ ಆರು ತಿಂಗಳ ಕಾಲ ನಮ್ಮ 18 ಶಾಸಕರನ್ನು ಅಮಾನತು ಮಾಡಿದ್ದಾರೆ. ಇತಿಹಾಸದಲ್ಲಿ ಇಷ್ಟು ಸುದೀರ್ಘವಾಗಿ ಅಮಾನತು ಮಾಡಿರುವ ಉದಾಹಾರಣೆಗಳು ಇಲ್ಲ. ಆ ಶಾಸಕರೇನು ಭಯೋತ್ಪಾದಕರಾ ಅಥವಾ ನಕ್ಸಲರಾ?  ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.

Key words: MLAs , suspension order, withdrawal, BY Vijayendra