ಶಿವಮೊಗ್ಗ, ಜನವರಿ,4,2025 (www.justkannada.in): ಬಜೆಟ್ ನಂತರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಬಿವೈ ವಿಜಯೇಂದ್ರ, ರಾಜಕೀಯ ದಾಳ ಉರುಳಿಸಲು ಸಿಎಂ ಮುನ್ನುಡಿ. ಸಿಎಂ ಸ್ಥಾನ ಬಿಡಲು ಸಿದ್ದರಾಮಯ್ಯ ಸಿದ್ದರಿಲ್ಲ. ಆದರೆ ಸಿದ್ದರಾಮಯ್ಯರನ್ನ ಸಿಎಂ ಆಗಿ ಮುಂದುವರೆಸಲು ವಿರೋಧಿ ಬಣದಿಂದ ಆಕ್ಷೇಪವಿದೆ. ಡಿಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ನಿನ್ನೆ ಸಭೆ ನಡೆದಿದೆ. ಸಭೆಯೇ ಕಾಂಗ್ರೆಸ್ ಪಕ್ಷದಲ್ಲಿ ಸರಿಯಲ್ಲ ಎಂಬುದಕ್ಕೆ ಸಾಕ್ಷಿ ಎಂದರು.
ಕಲಬುರುಗಿ ಪ್ರತಿಭಟನೆಗೆ ಗೈರಾದ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಶಿಕಾರಿಪುರಕ್ಕೆ ಬಂದಿರೋದ್ರಿಂದ ಭಾಗಿಯಾಗಿಲ್ಲ. ರಾಜ ಕಪನೂರು ಬೆದರಿಕೆಗೆ ಸಚಿನ್ ಸೂಸೈಡ್ ಮಾಡಿಕೊಂಡಿದ್ದಾನೆ. ಸಿಐಡಿ ತನಿಖೆಯಿಂದ ಯಾರಿಗೂ ನ್ಯಾಯ ಸಿಗಲ್ಲ ಎಂದರು.
Key words: CM Siddaramaiah, resign, after, budget, BY Vijayendra