ಬೆಂಗಳೂರು,ಏಪ್ರಿಲ್,3,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಅನುಮತಿ ನೀಡಿರುವ ವಿಚಾರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿ.ವೈ ವಿಜಯೇಂದ್ರ, ಮುಡಾ ಕೇಸ್ ಇಡಿ ತನಿಖೆಗೆ ಒಪ್ಪಿಗೆ ನೀಡಿರುವ ಹೈಕೋರ್ಟ್ ಆದೇಶ ಸ್ವಾಗತಿಸುವೆ. 14 ಸೈಟ್ ಗಳನ್ನ ವಾಪಸ್ ನೀಡಿದ್ದಾರೆ. 14 ಸೈಟ್ ವಾಪಸ್ ಮಾಡಿದ್ರೆ ಅದು ತಪ್ಪು ಒಪ್ಪಿಕೊಂಡಂತೆ ಅಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರ ಲೂಟಿ ಮಾಡುತ್ತಿದೆ. ಸಿದ್ದರಾಮಯ್ಯ ಸಿದ್ದಾಂತ ಕಪಟ ನಾಟಕವನ್ನು ತೋರಿಸಿದೆ. ಏಪ್ರಿಲ್ 7 ರಿಂದ ಜನಾಕ್ರೋಶ ಹೋರಾಟ ಮಾಡುತ್ತೇವೆ . ಬಿಜೆಪಿಯ ನಿರಂತರ ಹೋರಾಟದಿಂದ ಕಾಂಗ್ರೆಸ್ ಗೆ ಪಾಠ ಕಲಿಸುತ್ತೇವೆ ಎಂದರು.
Key words: MUDA case, ED ,Investigation, BY Vijayendra