ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ

ಮೈಸೂರು,ಜನವರಿ,17,2025 (www.justkannada.in): ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ದಿ ಬಗ್ಗೆ ಚಿಂತೆಯಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕಳೆದ ಕೆಲ ದಿನಗಳಲ್ಲಿ ಅನೇಕ ಘಟನೆಗಳು ನಡೆಯುತ್ತಿವೆ. ಗುಲ್ಬರ್ಗಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಲಾಗಿದೆ. ಮತ್ತೊಂದು ಕಡೆ ಬೀದರ್ ನಿನ್ನೆ ಹಣ ತುಂಬಲು ಬಂದಿದ್ದ ಎಸ್ ಬಿಐ ಸಿಬ್ಬಂದಿಗಳನ್ನ ಹತ್ಯೆ ಮಾಡಿ ದುಷ್ಕರ್ಮಿಗಳು ದರೋಡೆ ಮಾಡಿದ ಘಟನೆ ನಡೆದಿದೆ. ದೇಶದ್ರೋಹಿಗಳನ್ನು ಮಟ್ಟ ಹಾಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿಲ್ಲ. ಯಾರು ಏನು ಬೇಕಾದರೂ ಮಾಡಬಹುದು ಅನ್ನುವ ತರ ಆಗಿದೆ. ತುಷ್ಟೀಕರಣ ನೀತಿ ಇದಕ್ಕೆಲ್ಲ ಕಾರಣ. ರಾಜ್ಯ ಸರ್ಕಾರ ಏನನ್ನೂ ಕೂಡ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಗುತ್ತಿಗೆದಾರ ಸಚಿನ್ ಅತ್ಮಹತ್ಯೆ ಆಯಿತು. ನಮ್ಮ ಹೋರಾಟದ ಬಳಿಕ ಒಬ್ಬ ಕಾಂಗ್ರೆಸ್ ಪುಡಾರಿಯನ್ನೂ ಅರೆಸ್ಟ್ ಮಾಡಿದ್ದಾರೆ. ಅವನಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಈ ಸರ್ಕಾರಕ್ಕೆ ಅಭಿವೃದ್ದಿ ಬಗ್ಗೆ ಚಿಂತೆಯಿಲ್ಲ. ರೈತರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಜಾತಿಗಣತಿ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿಯನ್ನು ಪಗಡೆಯಾಟ ಅಂದುಕೊಂಡಿದ್ದಾರೆ. ಜಾತಿ ವರದಿಯನ್ನು ರಾಜಕೀಯ ದಾಳ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ತಮ್ಮ ಕುರ್ಚಿ ಅಲ್ಲಾಡುವಾಗ ಅವರಿಗೆ ಜಾತಿಗಣತಿ ವರದಿ ನೆನಪಿಗೆ ಬರುತ್ತದೆ ಎಂದು ಲೇವಡಿ ಮಾಡಿದರು.

ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ. ಈ ಹಿನ್ನಲೆ ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದ ವಿರೋಧ ಮಾಡುತ್ತಿದೆ. ಬೇರೆ ಜಾತಿಯವರಿಗೆ ನ್ಯಾಯ ಕೊಡಿ ನಮ್ಮ ಬೆಂಬಲವಿದೆ. ಆದರೆ ರಾಜಕೀಯ ಮಾಡಲು ಜಾತಿಗಣತಿ ಇಟ್ಟುಕೊಂಡು ಆಟಬೇಡಿ. ವರದಿ ಸೋರಿಕೆ ಆಗಿದೆ ಹಾಗೂ ಗಣತಿ ಸರಿಯಾಗಿ ಆಗಿಲ್ಲ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

ನನಗೆ ವಿಜಯೇಂದ್ರ ಎಚ್ಚರಿಕೆ ನೀಡಲಿ ಎಂದು ಶಾಸಕ ಯತ್ನಾಳ್ ಸವಾಲು ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಅವರಿಗೆ ಒಳ್ಳೆಯದಾಗಲಿ. ಯಡಿಯೂರಪ್ಪ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ರಮೇಶ್ ಜಾರಕಿಹೊಳಿಗೆ ಸೇರಿದಂತೆ ಅನೇಕರಿಗೆ ಹೇಳಿದ್ದೆ. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಕಾರ್ಯಕರ್ತರಿಗೆ ನೋವಾಗತ್ತದೆ. ಹಳ್ಳಿಯಿಂದ ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ ಎಂದರು.

Key words: Law and order, situation, BY Vijayendra, mysore