ಅಪಘಾತ: ಶಾಲಾ ಮಕ್ಕಳ ನೆರವಿಗೆ  ಧಾವಿಸಿ ಮಾನವಿಯತೆ ಮೆರೆದ ಬಿ ವೈ ವಿಜಯೇಂದ್ರ.

ಕಲಬುರಗಿ,ಫೆಬ್ರವರಿ,1,2025 (www.justkannada.in): ರಸ್ತೆ ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಾಲಾ ಮಕ್ಕಳ ನೆರವಿಗೆ ಧಾವಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾನವೀಯತೆ ಮೆರೆದಿದ್ದಾರೆ.

ಕಲಬುರಗಿ ಜಿಲ್ಲೆಯ ಗಣಗಾಪುರಕ್ಕೆ ಪ್ರಯಾಣ ಮಾಡುತ್ತಿದ್ದಾಗ ರಸ್ತೆ ಅಪಘಾತದಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಾಲಾ ಮಕ್ಕಳ ನೆರವಿಗೆ ಧಾವಿಸುವ ಮೂಲಕ ಬಿವೈ ವಿಜಯೇಂದ್ರ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ್ ಮಾನವೀಯತೆ ಮೆರೆದಿದ್ದಾರೆ. ಬಿವೈ ವಿಜಯೇಂದ್ರ ಅವರು   ತಮ್ಮ ವಾಹನದಲ್ಲೇ ಗಾಯಗೊಂಡ ಮಕ್ಕಳನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೇ ಇನ್ನಿಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಿಗೆ ಬಂದ ಬಿವೈ ವಿಜಯೇಂದ್ರ ಸ್ವತಃ ತಮ್ಮ ವಾಹನದಲ್ಲೆ  ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

Key words: Accident,  BY Vijayendra, humanity , school children