ಒಂದು ವಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಾರು ಎಂದು ಗೊತ್ತಾಗಲಿದೆ- ಬಿವೈ ವಿಜಯೇಂದ್ರ

ಶಿವಮೊಗ್ಗ,ಫೆಬ್ರವರಿ,3,2025 (www.justkannada.in): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಿಂದ ಪಕ್ಷಕ್ಕೆ ಡ್ಯಾಮೇಜ್  ಎಂಬ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪಕ್ಷಕ್ಕೆ ಏನು ಡ್ಯಾಮೇಜ್ ಆಗಬೇಕೋ ಆಗೋಗಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಒಂದು ವಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಯಾರು ಎಂಬುದಕ್ಕೆ ಉತ್ತರ ಸಿಗುತ್ತೆ. 8 ರಿಂದ 10ದಿನದಲ್ಲಿ ರಾಜ್ಯಾಧ್ಯಕ್ಷರ ಬಗ್ಗೆ ಗೊತ್ತಾಗಲಿದೆ. ಆ ನಂತರ ಎಲ್ಲವೂ ಸರಿಯಾಗಲಿದೆ ಎಂದರು.

ನಾನು ಕಳೆದ ವರ್ಷದಿಂದ ಯಾರ ವಿರುದ್ದವೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ದ ಹೇಳಿಕೆ ಕೊಟ್ಟಿಲ್ಲ ಪಕ್ಷದ ರಾಜ್ಯಾಧ್ಯಕ್ಷನಗಿ ನನಗೆ ಕರ್ತವ್ಯದ ಅರಿವಿದೆ. ಕಳೆದ 1 ವರ್ಷದಿಂದ ದೊಡ್ಡ ಜವಾಬ್ದಾರಿಯನ್ನ ನಿರ್ವಹಿಸುತ್ತಾ ಬಂದಿದ್ದೇನೆ ಎಂದರು.

Key words: BJP, state,  president, BY Vijayendra