ಅವರದ್ದು ಆಚಾರ ಇಲ್ಲದ ನಾಲಗೆ: ಮೋದಿ ಶನಿ ಎಂದ ರಮೇಶ್ ಕುಮಾರ್ ವಿರುದ್ದ ಬಿವೈ ವಿಜಯೇಂದ್ರ ಆಕ್ರೋಶ

ಮೈಸೂರು,ಏಪ್ರಿಲ್,22,2024 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರನ್ನ ಶನಿ ಎಂದು  ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಕುಮಾರ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ,  ರಮೇಶ್ ಕುಮಾರ್ ಅವರ ಹೇಳಿಕೆಗೆ ಬಿಜೆಪಿ ಖಂಡಿಸಲಿದೆ. ಅವರ ಯೋಗ್ಯತೆ ಅವರ ಕ್ಷೇತ್ರದ ಮತದಾರರಿಗೆ ಗೊತ್ತಿದೆ. ಆ ಕಾರಣಕ್ಕೆ ಕ್ಷೇತ್ರದ ಜನ ಅವರನ್ನ ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಅವರದ್ದು ಆಚಾರ ಇಲ್ಲದ ನಾಲಗೆ ಅವರ ನಾಲಗೆ ಅವರ ಸಂಸ್ಕೃತಿ‌ ತೋರಿಸಲಿದೆ.  ಸಿಎಂ ಆರುವರೆ ಕೋಟಿ ಸಿಎಂ ಎಂಬುದನ್ನ ಮರೆತಿದ್ದಾರೆ. ದೇಶದ ಪ್ರಧಾನಿಯನ್ನ ಅವಹೇಳನವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹಾಳಾಗಿದೆ. ದರಿದ್ರ ಸರಕಾರ ಗ್ಯಾರೆಂಟಿ‌ ಇರಲಿ ಮಹಿಳೆಯರನ್ನ ರಕ್ಷಣೆ ಮಾಡುತ್ತಿಲ್ಲ. ಮಹಿಳೆಯರಿಗೆ ರಕ್ಷಣೆ ನೀಡದೆ ನಾಲಾಯಕ್ ಪ್ರದರ್ಶನ ತೋರಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು

ನೇಹ ಹತ್ಯೆ ಪ್ರಕರಣ ಸಂಬಂಧ, ರಾಜ್ಯದ ಯಾವೊಬ್ಬ ಸಚಿವ ಸಾಂತ್ವನ‌ ಹೇಳಿಲ್ಲ. ಬದಲಿಗೆ ಅವರ ಕುಟುಂಬದ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿಎಂ , ಗೃಹ ಸಚಿವರ ಹೇಳಿಕೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಪೊಲೀಸರನ್ನ ಬಳಸಿಕೊಂಡು ಆ ಕುಟುಂಬದ ತೇಜೋವಧೆ ಮಾಡಿದೆ. ನಾಲಾಯಕ್ ಮುಖ್ಯಮಂತ್ರಿ ಪಡೆದು ರಾಜ್ಯಕ್ಕೆ ಶಾಪವಾಗಿದೆ. ಕೊಲೆಗಡುಕರಿಗೆ ಸರ್ಕಾರ ರಕ್ಷಣೆ ಮಾಡುತ್ತಿದೆ. ಇದೊಂದು‌ ಅಕ್ಷ್ಯಮ್ಯ ಅಪರಾಧ. ರಾಜ್ಯ ಸರ್ಕಾರಕ್ಕೆ‌  ಧಿಕ್ಕಾರ.. ಧಿಕ್ಕಾರ..ಧಿಕ್ಕಾರ ಎಂದು ಮೂರು ಬಾರಿ ಪುನರುಚ್ಚರಿಸಿದರು.

ನೇಹಾ ಹತ್ಯೆ ಪ್ರಕರಣ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ,  ಕುಟುಂಬಕ್ಕೆ ರಕ್ಷಣೆ ನೀಡುವ ಬದಲು ತನಿಖೆ‌ ಏನು ಮಾಡ್ತಾರೆ. ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಒಬ್ಬ ದಲಿತ ಶಾಸಕನ ಮನೆಗೆ‌ ನುಗ್ಗಿದಾಗ ಏನು ಮಾಡಿದ್ರು. ಅಖಂಡ ಶ್ರೀನಿವಾಸ್ ಗೆ ನೀವು ಏನು ಮಾಡಿದ್ರಿ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ಇದೇ ವೇಳೆ ಸಚಿವ ಸಂತೋಷ್ ಲಾಡ್ ವಿರುದ್ದವೂ ಹರಿಹಾಯ್ದ ಬಿವೈ ವಿಜಯೇಂದ್ರ, ಯಾರ್ರೀ ಸಂತೋಷ್ ಲಾಡ್…? ಅವನೊಬ್ಬ ನಾಲಾಯಕ್ ಸಂತೋಷ್ ಲಾಡ್. ಇದೇ ರೀತಿ ಮಾತನಾಡುತ್ತಾ ಹೋಗಲಿ  ಹೆಣ್ಣು ಮಕ್ಕಳು ಬಡಿಗೆ ಹಿಡಿದುಕೊಂಡು‌ ಹೊಡಿತಾರೆ. ನಾವು ಮುಸಲ್ಮಾನ ಬಗ್ಗೆ ಮಾತನಾಡುತ್ತಿಲ್ಲ ದೇಶ ದ್ರೋಹಿಗಳು, ಕೊಲೆಗಡುಕರ ಬಗ್ಗೆ ಮಾತನಾಡುತ್ತಿದ್ದೇವೆ. ಅಲ್ಪ ಸಂಖ್ಯಾತ ತುಷ್ಠೀಕರಣ ಮಾಡುತ್ತಿರುವವರ ವಿರುದ್ಧ ನಮ್ಮ ಬೇಸರ. ಅಂತಹವರ ರಕ್ಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ. ಜನಗಳ ತಾಳ್ಮೆಗೂ ಕೂಡ ಹಿತಿ‌ಮಿತಿ ಇದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸ್ತಾರೆ ಎಂದರು.

Key words: BY Vijayendra, against, Ramesh Kumar