ಬೆಂಗಳೂರು,ಆಗಸ್ಟ್,4,2021(www.justkannada.in): ಸಿಎಂ ಬಸರವಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಇಂದು ರಚನೆಯಾಗಲಿದ್ದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ನೂತನ ಸಚಿವರ ಪಟ್ಟಿ ಈಗಾಗಲೇ ಅಂತಿಮವಾಗಿದ್ದು ಪಟ್ಟಿ ಬಿಡುಗಡೆಯಾಗಿದೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಸಚಿವರಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ನೂತನ ಸಚಿವರ ಪಟ್ಟಿಯಲ್ಲಿ ಬಿವೈ ವಿಜಯೇಂದ್ರ ಹೆಸರು ಇಲ್ಲ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಹಿಂದೆ ಬಿಎಸ್ ವೈ ಸಂಪುಟದಲ್ಲಿ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ್ ಸವದಿಗೆ ಕೋಕ್ ನೀಡಲಾಗಿದೆ. ಕೆಲ ಹಿರಿಯರಿಗೆ ಪಕ್ಷ ಸಂಘಟಿಸುವ ಕೆಲಸ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇನ್ನು ಬಿಎಸ್ ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಿದ್ದವರಿಗೂ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಸಂಪುಟದಿಂದ ಸಿಪಿ ಯೋಗೇಶ್ವರ್ ಗೂ ಕೋಕ್ ನೀಡಲಾಗಿದೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರಿಗೂ ಸಹ ಸಚಿವ ಸ್ಥಾನ ಸಿಕ್ಕಿಲ್ಲ.
ENGLISH SUMMARY…
No name of B.Y. Vijendra in list of new ministers: No chance for a few including Suresh Kumar
Bengaluru, August 4, 2021 (www.justkannada.in): The new cabinet, under the leadership of Chief Minister Basavaraj Bommai, has been formed, and the new ministers will probably be sworn in today at around 2:15 pm. The list of new ministers has been finalized and released.
Widespread rumours were making rounds that former Chief Minister B. S. Yediyurappa’s son B.Y. Vijendra will also get a place definitely. However, Chief Minister Basavaraj Bommai himself informed that Vijendra’s name is not on the list.
S. Suresh Kumar, Aravind Limbavali, and Lakshman Savadi who were ministers in BSY’s cabinet have been left out. CM Basavaraj Bommai also informed that chance will be given to a few seniors of the party.
Persons who had raised their voice against B.S. Yediyurappa have also received a shock. The names of C.P. Yogeshwar, Basanagouda Patil Yatnal, and Aravind Bellad have also not received any place in the cabinet.
Keywords: Chief Minister Basavaraj Bommai/ new cabinet/ new ministers/ 2:15 pm/ sworn-in
Key words: BY Vijayendra- name -not – minister’s list