ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ: ಸಭಾಪತಿಗೆ ಸಿ.ಟಿ ರವಿ ವಿರುದ್ದ ದೂರು

ಬೆಳಗಾವಿ,ಡಿಸೆಂಬರ್,19,2024 (www.justkannada.in):  ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಯನ್ನ ಖಂಡಿಸಿ ಇಂದು ರಾಜ್ಯ ವಿಧಾನಮಂಡಲ ಉಭಯಸದನಗಳಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ಎಂಎಲ್ ಸಿ ಸಿ.ಟಿ ರವಿ  ಆಕ್ಷೇಪಾರ್ಹ ಪದ  ಬಳಕೆ ಮಾಡಿದ ಆರೋಪ  ಕೇಳಿ ಬಂದಿದೆ.

ಈ ಸಂಬಂಧ ವಿಧಾನ ಪರಿಷತ್ ಕಲಾಪ ಮುಂದೂಡಿಕೆಯಾದರೂ ಸಹ ಗದ್ದಲ ಮುಂದುವರೆದಿದ್ದು ಎಂಎಲ್ ಸಿ ಸಿಟಿ ರವಿ ಅಶ್ಲೀಲ ಪದ ಬಳಸಿದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಅಲ್ಲದೆ  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಸದಸ್ಯರನ್ನು ಕರೆತಂದು  ಪ್ರತಿಭಟನೆ ನಡೆಸಿದ್ದು ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂ ನೀಡಿದರು. ದೂರು ಸ್ವೀಕರಿಸಿದ ಸಭಾಪತಿ ಹೊರಟ್ಟಿ ಅವರು ಆಡಿಯೋ ವಿಡಿಯೋ ಪರಿಶೀಲನೆಗೆ ಸೂಚನೆ ನೀಡಿದ್ದಾರೆ.

ಎಂಎಲ್ ಸಿ ಸಿಟಿ ರವಿ ಸ್ಪಷ್ಟನೆ…

ಈ ಕುರಿತು ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿರುವ ಸಿ.ಟಿ ರವಿ, ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಾನು ಆಕ್ಷೇಪಾರ್ಹ ಪದ ಬಳಸಿಲ್ಲ. ನಾನು ಪದ ಬಳಸಿದ ದಾಖಲೆ ಇದ್ದರೇ ತೆಗೆಯಿರಿ. ನಾನು ಆ ರೀತಿಯ ಪದ ಬಳಸಿಲ್ಲ. ನಾನು ಕಪೋಲ ಕಲ್ಪಿತ ಹೇಳಿಕೆಗಳಿಗೆ ಉತ್ತರ ನೀಡಲ್ಲ ಎಂದಿದ್ದಾರೆ.

Key words: C.T. Ravi, allegedly, Minister, Lakshmi Hebbalkar