ಬೆಂಗಳೂರು,ಮಾರ್ಚ್,31,2021(www.justkannada.in) : ಕ್ಯಾಬ್ ಉದ್ಯಮದ ದರ ಸಮರ, ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಾಪ್ ಜೀವ ಬಲಿಯಾಗಿದೆ. ಟ್ಯಾಕ್ಸಿ, ಕ್ಯಾಬ್‌ಗಳಿಗೆ ಸರ್ಕಾರ 1 ಕಿ.ಮೀಗೆ 24 ರೂ. ದರ ನಿಗದಿ ಮಾಡಿದೆ. ಕೆಎಸ್‌ಟಿಡಿಸಿ ಚಾಲಕರು ಇದನ್ನು ಪಾಲಿಸುತ್ತಿದ್ದರೆ, ಖಾಸಗಿ ಕಂಪನಿಗಳು ನಿಯಮ ಗಾಳಿಗೆ ತೂರಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಎಸ್‌ಟಿಡಿಸಿ ಚಾಲಕರು ಸೊರಗುತ್ತಿದ್ದಾರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಬಾಡಿಗೆ ದೊರೆಯದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕೆಎಸ್‌ಟಿಡಿಸಿ ಕ್ಯಾಬ್ ಚಾಲಕ ಪ್ರತಾಪ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಾಪ್ ಅವರ ಸಾವಿನೊಂದಿಗೆ ಕೆಎಸ್‌ಟಿಡಿಸಿ ಚಾಲಕರ ಸಮಸ್ಯೆಗಳು ತೆರೆದುಕೊಂಡಿವೆ ಎಂದು ವಿಷಾದವ್ಯಕ್ತಪಡಿಸಿದ್ದಾರೆ.
ಕೆಎಸ್‌ಟಿಡಿಸಿ ಕ್ಯಾಬ್‌ಗಳು ದರ ನಿಯಮ ಪಾಲಿಸುತ್ತಿದ್ದರೆ, ಖಾಸಗಿ ಕ್ಯಾಬ್‌ಗಳು 9ಕ್ಕೆ ಗ್ರಾಹಕರನ್ನು ಸೆಳೆಯುತ್ತಿವೆ. ಹೀಗಾಗಿ, ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಗ್ರಾಹಕರೇ ಇಲ್ಲದಂತಾಗಿದೆ. ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲೂ ನಡೆಯುತ್ತಿರುವ ರಾಜಕೀಯ ಚಾಲಕರ ಕೊರಳು ಹಿಂಡುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ದರ ಸಮರದತ್ತ ಕೂಡಲೇ ಗಮನಹರಿಸಬೇಕು. ನಿಯಮ ಪಾಲಿಸದೇ ಮಾರುಕಟ್ಟೆಯಲ್ಲಿ ಅನಗತ್ಯ ಪೈಪೋಟಿ ಸೃಷ್ಟಿ ಮಾಡುತ್ತಿರುವ, ಆ ಮೂಲಕ ಅಮಾಯಕ ಚಾಲಕರ ಪ್ರಾಣ ಕಸಿಯುತ್ತಿರುವ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕು. ಅದರ ಮೂಲಕ ಅಮಾಯಕ, ಶ್ರಮಜೀವಿ ಕ್ಯಾಬ್ ಚಾಲಕರ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಟ್ವೀಟ್ ಮೂಡಿದ್ದಾರೆ.
ENGLISH SUMMARY…
“Cab business price war, negligence of govt. takes Pratap’s life: Former CM HDK
Bengaluru, Mar. 31, 2021 (www.justkannada.in): “Pratap has lost of life due to the cab business price war and the negligence of the government. The government has fixed a sum of Rs. 24 for cabs per kilometer. While KSTDC drivers are following this, private companies are not following it and are attracting customers, causing inconvenience to the KSTDC drivers,” opined former Chief Minister H.D. Kumaraswamy.
It can be recalled here that a KSTDC cab driver named Pratap had attempted to commit suicide by flaming himself yesterday, at the Bengaluru International Airport. He took this extreme step due to the financial burden as he couldn’t get any customers for the last few days. He succumbed yesterday at midnight. Expressing his grief about the incident former CM H.D. Kumaraswamy in his tweet mentioned that Pratap’s death has exposed the problems of the KSTDC drivers.
“KSTDC cab drivers are following the rules. But private cabs are attracting customers by offering much lower prices. Hence, KSTDC cabs are not getting any business causing problems to the KSTDC drivers. The politics that place in the parking lot at the Airport have added to their sorrows squeezing their lives,” the tweet read.
He has also demanded that the government should immediately take measures to address the price war and warn the private companies that are not following rules and taking the lives of innocent drivers who are unable to compete.
Keywords: Former CM H.D. Kumaraswamy/ KSTDC cab drivers/ driver burns himself/ Bengaluru International Airport/ Pratap
key words : cab-industry-Rate war-neglect-government-Pratap-sacrificed- life-Former CM-H.D.Kumaraswamy