ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ: ಸಂಪುಟ ಪುನರಚನೆ ಸುಳಿವು  ನೀಡಿದ ‘ಕೈ’ ಶಾಸಕ

 

ಮೈಸೂರು,ನವೆಂಬರ್,22,2024 (www.justkannada.in): ರಾಜ್ಯದಲ್ಲಿ ಮುಡಾ ಹಗರಣ, ವಕ್ಫ್ ಆಸ್ತಿ ವಿವಾದ ಚರ್ಚೆ ಬೆನ್ನಲ್ಲೆ ಇದೀಗ ಸಚಿವ ಸಂಪುಟ ಪುನರಚನೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಮಧ್ಯೆ ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ  ಸಚಿವ ಸಂಪುಟದ ಪುನಾರಚನೆಯ ಸುಳಿವು  ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು  ಮಾತನಾಡಿದ ಶಾಸಕ ಕೃಷ್ಣಮೂರ್ತಿ,  ಸಂಪುಟ ಪುನಾರಚನೆ ಆದರೂ ಆಗಬಹುದು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಚಿವ ಸ್ಥಾನ ನಿಭಾಹಿಸುವ ಬುದ್ಧಿಶಕ್ತಿಯಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ವಿಚಾರ ಕುರಿತು ಮಾತನಾಡಿದ ಶಾಸಕ ಎಆರ್ ಕೃಷ್ಣಮೂರ್ತಿ, ನನಗೆ ಯಾವುದೇ ಆಫರ್ ಬಂದಿಲ್ಲ. ನಾನು ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ಬಂತು ಅಂತ ಬಿಜೆಪಿ ಬಿಟ್ಟು ಬಂದೆ. ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಖಂಡಿಸಿ ಬಿಜೆಪಿ ಬಿಟ್ಟೆ. ಸಂವಿಧಾನ ಬದಲಾವಣೆ ಎಂಬ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದೇನೆ. ಹಾಗಾಗಿ ಆಫರ್ ಬಂದರೂ ನಾನು ಹೋಗಲ್ಲ  ಎಂದರು.

ಯಾವಾಗ ಏನಾಗತ್ತೋ ಗೊತ್ತಿಲ್ಲ. ಬೇಗ ಕಾಂಗ್ರೆಸ್ ಕಛೇರಿ ಕಟ್ಟಿ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೃಷ್ಣಮೂರ್ತಿ, ಪರಮೇಶ್ವರ್ ಯಾಕೆ ಆ ರೀತಿ ಹೇಳಿಕೆ ಕೊಟ್ಟರು ಗೊತ್ತಿಲ್ಲ. ನಾನು ಕೂಡ ಪೇಪರ್ ಓದಿ ಈ ವಿಚಾರ ತಿಳಿದುಕೊಂಡೆ. ಆ ಬಗ್ಗೆ ಅವರನ್ನೇ ಕೇಳಿ. ಸರ್ಕಾರ ಸ್ಟೇಬಲ್ ಆಗಿದೆ. ನಮ್ಮ ಸರ್ಕಾರ ಬೀಳಿಸಲು ಆಗಲ್ಲ ಎಂದರು.

Key words: Cabinet expansion, ministerial post, congress, MLA