ಬೆಂಗಳೂರು,ಅಕ್ಟೋಬರ್,18,2022(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಚರ್ಚಿಸಲು ವರಿಷ್ಠರು ಸಮಯ ಕೊಟ್ಟರೇ ದೆಹಲಿಗೆ ಹೋಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಂಕಲ್ಪಯಾತ್ರೆಯ ನಡುವೆಯೂ ಭೇಟಿ ಮಾಡಲು ವರಿಷ್ಠರ ಬಳಿ ಸಮಯ ಕೇಳಿದ್ದೇನೆ. ವರಿಷ್ಟರು ಸಮಯ ಕೊಟ್ಟರೇ ದೆಹಲಿಗೆ ಹೋಗಿ ಚರ್ಚಿಸುತ್ತೇನೆ ಎಂದರು.
ರಸ್ತೆಗುಂಡಿಗೆ ಮಹಿಳೆ ಬಲಿಯಾದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸೂಕ್ತ ತನಿಖೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧೇನೆ. ಮಹಿಳೆ ಸಾವಿನ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ . ತಪ್ಪಿತಸ್ಥರ ವಿರದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
Key words: cabinet- expansion –Delhi-CM -Basavaraja Bommai.