ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆ ನಿಗದಿ.

ಬೆಂಗಳೂರು,ಜನವರಿ,2,2025 (www.justkannada.in): ಇಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ವಿವಿಧ ವಿಚಾರಗಳು ಚರ್ಚೆಗೆ ಬರಲಿವೆ.

ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಕ್ಯಾಬಿನೆಟ್ ಮೀಟಿಂಗ್ ನಲ್ಲಿ 15ಕ್ಕೂ ಹೆಚ್ಚು ಅಜೆಂಡಾಗಳ ಕುರಿತು ಚರ್ಚೆಯಾಗಲಿದೆ ಎನ್ನಲಾಗಿದೆ.

ಸಭೆಯಲ್ಲಿ ಬಿಜೆಪಿ ಸರ್ಕಾರ ಘೋಷಿಸಿದ ಹೊಸ ಗೋ ಶಾಲೆಗಳಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ.  ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡುವ ಸಾಧ್ಯತೆ ಇದೆ.  2022-23ನೇ ಸಾಲಿನ ಬಜೆಟ್ ನಲ್ಲಿ ಗೋ ಶಾಲೆ ಘೋಷಣೆ  ಮಾಡಲಾಗಿತ್ತು. ಆದರೆ ಘೋಷಣೆಯಾಗಿರುವ ಗೋ ಶಾಲೆ ಸ್ಥಾಪನೆಯಾಗಿಲ್ಲ. ಹೀಗಾಗಿ ಹೊಸ ಗೋ ಶಾಲೆಗಳ ಪ್ರಸ್ತಾವನೆ ಕೈ ಬಿಟ್ಟು  ಈಗಿರುವ 14 ಜಿಲ್ಲೆಗಳ ಗೋ ಶಾಲೆ ಬಲವರ್ಧನೆಗೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Key words: Cabinet meeting, scheduled, afternoon