ಮೈಸೂರು,ಜುಲೈ,30,2021(www.justkannada.in): ನಾನು ಸಚಿವ ಸಂಪುಟಕ್ಕೆ ಸೇರುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಕೇಂದ್ರ ನಾಯಕರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ ಸಿಎಂ ರಾಜ್ಯದ್ಯಕ್ಷ ಹಾಗೂ ಕೇಂದ್ರ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದರು.
ಸಂಪುಟದಲ್ಲಿ ಸೇರ್ಪಡೆಯಾಗದಿರಲು ಜಗದೀಶ್ ಶೆಟ್ಟರ್ ನಿರ್ಧಾರ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರು ಹಿರಿಯರಾಗಿದ್ದಾರೆ. ತಮ್ಮ ಜೂನಿಯರ್ ಕೆಳಗೆ ಸಂಪುಟದಲ್ಲಿ ಇರುವುದಿಲ್ಲ ಎನ್ನುವ ತೀರ್ಮಾನ ಮಾಡಿದ್ದಾರೆ. ಇದಕ್ಕು ಕಟೀಲ್ ಅವರದ್ದು ಎನ್ನುವ ಆಡಿಯೋಗೂ ಸಂಬಂಧ ಇಲ್ಲ. ನನ್ನ ಪರವಾಗಿ ಸ್ವಾಮೀಜಿಗಳು ಸ್ನೇಹಿತರು ನನ್ನ ಪರವಾಗಿ ಮಾತನಾಡುತ್ತಾರೆ ಇದು ಖುಷಿ. ನಾನು ಸಚಿವನಾಗಬೇಕು, ಡಿಸಿಎಂ, ಸಿಎಂ ಆಗಬೇಕು ಅಪೇಕ್ಷ ಪಡುತ್ತಾರೆ. ನಾನು ರಾಜಕಾರಣಿ, ರಾಜಕಾರಣಿ ನಿರೀಕ್ಷೆ ಇರುತ್ತೆ. ಆದ್ರೆ ಕೇಂದ್ರ ನಾಯಕರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದರು.
Key words: cabinet-ministrial-post-Former minister -KS Eshwarappa