ಬೆಂಗಳೂರು,ಅಕ್ಟೋಬರ್,26,2020(www.justkannada.in) : ಬಹು ನಿರೀಕ್ಷತ ಹಾಗೂ ಕೇಂದ್ರ ಸಚಿವರಾಗಿದ್ದ ದಿ.ಸುರೇಶ್ ಅಂಗಡಿಯವರ ಕನಸಿನಂತೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಕೇಂದ್ರ ಆರ್ಥಿಕ ಸಚಿವಾಲಯವು ಅಕ್ಟೋಬರ್ 7ರಂದು ನಡೆಸಿದ ಸಭೆಯಲ್ಲಿ ಅಂದಾಜು 13,926 ಕೋಟಿ ವೆಚ್ಚದಲ್ಲಿ, 148 ಕಿಲೋ ಮೀಟರ್ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಸಹಿ ಹಾಕಿದ್ದು, ಕಾಮಾಗಾರಿ ಪೂರ್ಣಗೊಳ್ಳುವಷ್ಟರಲ್ಲಿ 15,767 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರ ವಾಸಿಗಳಿಗೆ ಅನುಕೂಲ, ಟ್ರಾಫಿಕ್ ದಟ್ಟಣೆ ಕಡಿಮೆ
ಈ ಯೋಜನೆಯಲ್ಲಿ ಬೆಂಗಳೂರು-ದೇವನಹಳ್ಳಿ, ಚಿಕ್ಕಬಾಣಾವರ-ಬೈಯಪ್ಪನಹಳ್ಳಿ, ಕೆಂಗೇರಿ-ವೈಟ್ಫೀಲ್ಡ್ ಹಾಗೂ ಹೀಲಲಿಗೆ-ರಾಜಾನುಕುಂಟೆ ಮಾರ್ಗಗಳು ಅಂತಿಮಗೊಂಡಿವೆ. ಇದರಿಂದ ಬೆಂಗಳೂರು ನಗರ ವಾಸಿಗಳಿಗೆ ಅನುಕೂಲವಾಗಲಿದ್ದು, ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಬಹುದಾದ ಈ ಯೋಜನೆಗಾಗಿ ದಿ.ಸುರೇಶ್ ಅಂಗಡಿಯವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮಾಹಿತಿಯನ್ನು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
key words : Cabinet-approves-Bengaluru-suburban-rail-project