ಬೆಂಗಳೂರು,ಜೂನ್,17,2022(www.justkannada.in): ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ತಡೆಗೆ ಅಭಿಯಾನ ನಡೆಸಿ. ಮೂರು ವಾರಗಳಲ್ಲಿ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಿ ಎಂದು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ವಿಚಾರ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ರಾತ್ರಿ 10ರಿಂದ ಬೆಳಗ್ಗೆ 6 ವರೆಗೆ ಲೌಡ್ ಸ್ಫೀಕರ್ ಬಳಕೆ ನಿರ್ಬಂಧ ವಿಧಿಸಲಾಗಿದೆ. ಉತ್ಸವ, ಸಮಾರಂಭಗಳ ವೇಳೆ ವಿಶೇಷ ಅನುಮತಿಗೆ ಅವಕಾಶ ನೀಡಲಾಗಿದೆ. ರಾತ್ರಿ 10 ರಿಂದ 12 ಗಂಟೆವರೆಗೆ 15 ದಿನಗಳ ಅವಧಿಗೆ ಅವಕಾಶ ನೀಡಬಹುದು. ಲೌಡ್ ಸ್ಫೀಕರ್‌ಗೆ ಶಾಶ್ವತ ಅನುಮತಿ ನೀಡುತ್ತಿಲ್ಲ. ಲೌಡ್ ಸ್ಫೀಕರ್ ಅನುಮತಿಗೆ ಈಗಾಗಲೇ ಸಮಿತಿ ರಚಿಸಲಾಗಿದೆ. ನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್‌ರ ಸಮಿತಿ ರಚಿಸಲಾಗಿದೆ. ಎರಡು ವರ್ಷಗಳವರೆಗೆ ಮಾತ್ರ ಲೈಸನ್ಸ್ ನೀಡಲಾಗುತ್ತದೆ. ಎರಡು ವರ್ಷಗಳ ನಂತರ ಲೈಸನ್ಸ್ ನವೀಕರಿಸಬಹುದಾಗಿದೆ ಎಂದು ಹೈಕೋರ್ಟ್ ಗೆ ಸರ್ಕಾರ ಪರ ವಕೀಲರು ಮಾಹಿತಿ ನೀಡಿದರು.
ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಲ್ಲಿಸಲು ಕೈಗೊಂಡ ಕ್ರಮವೇನು ? ಎಷ್ಟು ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ನೀಡಿದ್ದೀರಾ..? ಧಾರ್ಮಿಕ ಸ್ಥಳಗಳ ಸರ್ವೇ ನಡೆಸಿ ಕ್ರಮ ಕೈಗೊಳ್ಳಿ. ರಾತ್ರಿ ವೇಳೆ ಧ್ವನಿ ವರ್ಧಕ ಬಳಕೆಗೆ ಅಭಿಯಾನ ನಡೆಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆ 3 ವಾರಗಳ ಕಾಲ ಮುಂದೂಡಿತು.
Key words: Campaign – prevent -loudspeaker – night-High Court.