ಬೆಂಗಳೂರು,ಅಕ್ಟೋಬರ್,19,2021(www.justkannada.in): ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಹಿನ್ನೆಲೆಯಲ್ಲಿ ಈ ಬಾರಿ ಅಕ್ಟೋಬರ್ 24 ರಿಂದ ಒಂದು ವಾರಗಳ ಕಾಲ ಕನ್ನಡಕ್ಕಾಗಿ ನಾವು ಆಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿ ಮಾಹಿತಿ ನೀಡಿದ ಸಚಿವ ಸುನೀಲ್ ಕುಮಾರ್, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಈ ಬಾರಿ ಒಂದು ವಾರ ನಡೆಯಲಿದೆ. ಅಕ್ಟೋಬರ್ 24ರಿಂದ ಅ.30ರವರೆಗೆ `ಕನ್ನಡಕ್ಕಾಗಿ ನಾವು’ ಅಭಿಯಾನ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 4,500 ಅರ್ಜಿ ಸಲ್ಲಿಕೆಯಾಗಿದ್ದು, ಅಕ್ಟೋಬರ್ 28 ಅಥವಾ 29 ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ರಾಜ್ಯಕ್ಕೆ ಬಂದಿರುವ ಹೊರ ರಾಜ್ಯದವರು 100 ಪದ ಕನ್ನಡ ಬಳಸುವಂತೆ ಮನವಿ ಮಾಡಿದ್ದು, ಅ. 28 ರಂದು ಕನಿಷ್ಟ ಮೂರು ಕನ್ನಡ ಗೀತೆಯನ್ನು ಲಕ್ಷ ಕಂಠಗಳಲ್ಲಿ ಒಂದು ಸಾವಿರ ಕಡೆಗಳಲ್ಲಿ ಸಾಮೂಹಿಕ ಗಾಯ ನಡೆಸಲಾಗುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
Key words: campaigning – Kannadakkagi navu- October-24th– Minister- Sunil Kumar
ENGLISH SUMMARY…
One week duration ‘Kannadakaagi Naavu’ campaign from Oct. 24: Minister Sunil Kumar
Bengaluru, October 19, 2021 (www.justkannada.in): Kannada and Culture Minister Sunil Kumar today informed that a one-week duration campaign titled ‘Kannadakaagi Naavu’ (We for Kannada) would be held commencing from October 24, as part of the Kannada Rajyotsava celebrations on November 1.
Speaking in Bengaluru today, he informed that the campaign would run for one week commencing from October 24 to October 30. “This year, we have received 4,500 applications for the Kannada Rajyotsava awards. The names for the awards will be finalized and announced by October 28 or 29,” he said.
He requested people who have migrated from other states to speak in Kannada as much as possible. “A mass singing program would be held comprising at least three Kannada songs through one lakh voices, at one thousand places on October 28,” he added.
Keywords: Kannada and Culture Minister/ Sunil Kumar/ Kannadakaagi Naavu/ campaign/ October 24/Kannada Rajyotsava