ಮೈಸೂರು,ಸೆಪ್ಟಂಬರ್,23,2020(www.justkannada.in): ಸರಳ ದಸರಾ ಹೆಸರಲ್ಲಿ ಆಡಂಬರ ಬೇಡ. ದಸರಾ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಿ ಅದೇ ದುಡ್ಡಿಗೆ ವೆಂಟಿಲೇಟರ್ ತರಿಸಿ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೆಚ್ಚ ಮಾಡುವ ಹಣವನ್ನ ಕೋವಿಡ್ ನಿರ್ವಹಣೆಗೆ ಬಳಸಿ ಎಂದು ಪ್ರಗತಿಪರ ಚಿಂತಕ ಡಾ.ಮಹೇಶ್‌ಚಂದ್ರ ಗುರು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ. ಮಹೇಶ್ ಚಂದ್ರಗುರು, ಕೋವಿಡ್ 19 ನಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ವೆಂಟಿಲೇಟರ್ ಗಳಿಲ್ಲದೇ ಜನ ಸಾಯುತ್ತಿದ್ದಾರೆ. ಹೀಗಾಗಿ ಸರಳ ದಸರಾ ಹೆಸರಲ್ಲಿ ಆಡಂಬರ ಬೇಡ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜನರ ಸಾವು ನೋವಿನ ನಡುವೆ ಮನರಂಜನೆ ಬೇಕಾ..? ಅವರು ಸಾಯೋದು ನೋಡಿ ಮನರಂಜನೆ ಪಡೆಯುವುದಾದರೆ ನಿಮ್ಮಂತ ಮುಟ್ಟಾಳರಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಹಣದಲ್ಲಿ ವೆಂಟಿಲೇಟರ್ ತರಿಸಿ, ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಇದೆ. ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಲ್ಲದೆ ಹೆಚ್ಚಿನ ಸಮಸ್ಯೆ ಆಗಿದೆ. ಮೈಸೂರಿನಲ್ಲಿ ಇದುವರೆಗೂ ಕೋವಿಡ್ ನಿಂದ 700 ಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಈ ಸಂದರ್ಭದಲ್ಲಿ ಮನರಂಜನೆ ಎಂಬ ಪದವೇ ಅಪ್ರಸ್ತುತ. ಈಗಲೂ ಕಾಲಮಿಂಚಿಲ್ಲ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಿ. ಹತ್ತು ಕೋಟಿಯಲ್ಲಿ ಒಂದು ಕೋಟಿ ರಾಜ ಮನೆತನಕ್ಕೆ ನೀಡಿ. ಅವರು ಸಂಪ್ರದಾಯ, ಆಚರಣೆಯನ್ನ ಅದ್ದೂರಿಯಾಗಿ ಮಾಡುತ್ತಾರೆ. ಉಳಿದ ಒಂಭತ್ತು ಕೋಟಿ ಕೋವಿಡ್ ನಿರ್ವಹಣೆಗೆ ಬಳಸಿ ಎಂದು ಪ್ರೊ. ಮಹೇಶ್ ಚಂದ್ರಗುರು ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ, ಯಡಿಯೂರಪ್ಪಗೆ ಕೊರೋನ ಬಂದ್ರೆ ಮಣಿಪಾಲ್ ಗೆ ದಾಖಲಾಗ್ತಾರೆ. ಜನ ಸಾಮಾನ್ಯರು ಬೆಡ್‌ಗಳು ಸಿಗದೆ ಸಾಯ್ತಾ ಇದ್ದಾರೆ. ಮೈಸೂರಿನಲ್ಲಿ ಸಂಗೀತ, ನಾಟಕ, ಕಂಸಾಳೆ ಕಲಾವಿಧರು ತುಂಬಾ ಕಷ್ಟದಲ್ಲಿದ್ದಾರೆ. ಅವರಿಗೆ ಆರು ತಿಂಗಳಿಗಾಗುವ ರೇಷನ್, ಮೆಡಿಸನ್ ಕಿಟ್ ಕೊಡಬಹುದಿತ್ತು ಬೇರೆ ರಾಜ್ಯದಿಂದ ಕಲಾವಿಧರನ್ನ ಕರೆಸಿದ್ರೆ ನೋಡೋರು ಯಾರು ..? ರಾಜ್ಯದೆಲ್ಲೆಡೆ ಪ್ರವಾಹ ಬಂದು ಜನ ಬೀದಿ ಪಾಲಾಗ್ತಿದ್ದಾರೆ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಹಣ ಬಳಸಿದ್ರೆ ಸಹೃದಯಿ ಮುಖ್ಯಮಂತ್ರಿ ಅಂತ ಒಪ್ಕೋತಿದ್ರು. ಮೈಸೂರಿನ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಈ ಹಣ ಬಳಸಿಕೊಂಡಿದ್ರೆ ಹೃದಯವಂತಿಕೆ, ಸಂಸ್ಕಾರ ಹೆಚ್ಚುತ್ತಿತ್ತು. ಹೀಗಾಗಿ ಯಡಿಯೂರಪ್ಪಗೆ ಪ್ರತಿಷ್ಟೆ ರಾಜಕೀಯ ಬೇಡ, ನೀವು ಅಧಿಕಾರ ಪೂರ್ಣಗೊಳಿಸಬೇಕೆಂಬುದು ನನ್ನ ಬಯಕೆ ಎಂದು ಡಾ.ಮಹೇಶ್‌ಚಂದ್ರ ಗುರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
Key words: Cancel –dasara-cultural program-Bring -ventilator -Pro. Dr. Maheshchandra Guru.