ಬೆಂಗಳೂರು,ಮೇ,31,2021(www.justkannada.in): ರಾಜ್ಯದಲ್ಲಿ ಕೊರೋನಾ, ಲಾಕ್ ಡೌನ್ ನಿಂದಾಗಿ ಶಾಲಾ ಕಾಲೇಜುಗಳು ಬಂದ್ ಆಗಿದ್ದು ನಿಗದಿಯಾಗಿದ್ದ ಪರೀಕ್ಷೆಗಳೆಲ್ಲವೂ ಮುಂದೂಡಿಕೆಯಾಗಿದೆ. ಈ ಮಧ್ಯೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಯಾವಾಗ ಎಂಬ ಕುತೂಹಲವಿದೆ.
ಜೂನ್ ಜುಲೈ ನಲ್ಲೂ SSLC ಪರೀಕ್ಷೆ ನಡೆಯುವ ಸಂಭವ ಕಡಿಮೆ. ಇನ್ನು ಆಗಸ್ಟ್ ನಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ವೇಳೆಗೆ ಸೆಪ್ಟೆಂಬರ್ ಆಗಿರುತ್ತದೆ. ಹಾಗಾದರೆ 2021-22 ನೇ ಶೈಕ್ಷಣಿಕ ವರ್ಷ ಪ್ರಾರಂಭ ಯಾವಾಗ ಈ ಎಲ್ಲಾ ಗೊಂದಲಗಳು ಸೃಷ್ಟಿಯಾಗಿವೆ.
ಈ ನಡುವೆ CBSC ಮಂಡಳಿ ಈಗಾಗಲೇ ಮಕ್ಕಳನ್ನು ಪಾಸ್ ಮಾಡಿರುವುದರಿಂದ ಅವರೆಲ್ಲಾ ಖಾಸಗಿ ಕಾಲೇಜುಗಳಲ್ಲಿ ಜೂನ್ ನಿಂದಲೇ ಪ್ರವೇಶ ಪಡೆದು ಆನ್ ಲೈನ್ ಪಾಠ ಪಡೆಯುತ್ತಿರುತ್ತಾರೆ. ಖಾಸಗಿ ಶಾಲೆಗಳು ಜೂನ್ ನಿಂದಲೇ ಆನ್ ಲೈನ್ ನಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆಂಬ ಸುದ್ಧಿಯಿದೆ. ಇವೆಲ್ಲಕ್ಕೂ ಉತ್ತರವೆಂದರೆ ರಾಜ್ಯದಲ್ಲೂ SSLC ಪರೀಕ್ಷೆ ರದ್ದುಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವುದು ಹಾಗೂ 2021-22ನೇ ಶೈಕ್ಷಣಿಕ ವರ್ಷದ ಆರಂಭವನ್ನು ಜೂನ್ 15ರಿಂದಲೇ ಆರಂಭಿಸಿ ಕರೋನ ಕಡಿಮೆಯಾಗುವವರೆಗೆ ಆನ್ ಲೈನ್ ಶಿಕ್ಷಣ ಮತ್ತು ಪರ್ಯಾಯ ಉಪಕ್ರಮಗಳನ್ನು ಪ್ರಾರಂಭಿಸುವುದಾಗಿದೆ.
ಈ ಬೆಳವಣಿಗಯೇ ಖಾಸಗಿ ಶಾಲಾ ಶಿಕ್ಷಕರ ಸಮಸ್ಸೆಗಳಿಗೂ ಪರಿಹಾರವಾಗಬಲ್ಲದು. ಈ ದಿಸೆಯಲ್ಲಿ ಪರಿಷತ್ ಸದಸ್ಯರುಗಳು ಮಾನ್ಯ ಶಿಕ್ಷಣ ಸಚಿವರ ಜೊತೆ ಮಾತನಾಡುತ್ತಾರೆಂಬುದು ಶಿಕ್ಷಕ ವರ್ಗದ ನಂಬಿಕೆಯಾಗಿದೆ.
Key words: Cancel –SSLC- Examination – start – academic year -15th June