ಮೈಸೂರು,ಜೂನ್,2,2021(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದಾಗಬೇಕು ಮತ್ತು ಕರೋನಾ ಬಗ್ಗೆ ಕ್ರಮ ಕೈಗೊಳ್ಳುತೆ ಒತ್ತಾಯಿಸಿ ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಏಕಾಂಗಿ ಪ್ರತಿಭಟನೆ ನಡೆಸಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ರಸ್ತೆಯಲ್ಲಿ ಮಲಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಡಿಫರೆಂಟ್ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಜನರ ಜೀವ ಉಳಿಸಿ ಎಂದು ಘೋಷಣೆ ಕೂಗಿದ ವಾಟಾಳ್ ನಾಗರಾಜ್, SSLC ಪರೀಕ್ಷೆ ರದ್ದಾಗಬೇಕು, ಕರೋನಾ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಿಎಂ ಬಿಎಸ್ ವೈ ರಾಜೀನಾಮೆ ನೀಡಿದ್ರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿದೆ.
ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಾಟಾಳ್ ನಾಗರಾಜ್, ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿದೆ. ಪ್ರಕರಣ ಜರುಗಿ ಒಂದು ತಿಂಗಳಾದ್ರೂ ಯಾರಿಗೂ ಶಿಕ್ಷೆಯಾಗಿಲ್ಲ. 24 ಮಂದಿ ಸಾವನ್ನಪ್ಪಿದರೂ ಸಿಎಂ ಬಿಎಸ್ ವೈ ಜಿಲ್ಲೆಗೆ ಭೇಟಿ ನೀಡಲಿಲ್ಲ. ಯಡಿಯೂರಪ್ಪ ಮೌಢ್ಯಕ್ಕೆ ಅಂಟಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ತಪ್ಪಿತಸ್ಥರನ್ನ ವರ್ಗಾವಣೆ ಅಲ್ಲ ಜೈಲಿಗೆ ಕಳುಹಿಸಬೇಕು. ಜಿಲ್ಲಾಡಳಿತ ಬಗ್ಗೆ ಸರ್ಕಾರ ಯಾವ ಕ್ರಮವು ತೆಗೆದುಕೊಂಡಿಲ್ಲ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
Key words: cancel- SSLC- examination-Vatal Nagaraj – protest-mysore