ಬೆಂಗಳೂರು,ಜನವರಿ,21,2022(www.justkannada.in): ಕೊರೋನಾ ಹೆಚ್ಚಳವಾದ ಹಿನ್ನೆಲೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂವನ್ನ ರದ್ಧುಗೊಳಿಸಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಘೋಷಣೆ ಮಾಡಿದ್ದಾರೆ.
ಕೊರೋನಾ ನಿರ್ವಹಣೆ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಚಿವರು ತಜ್ಞರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ. ಈವಾರದಿಂದಲೇ ವೀಕೆಂಡ್ ಕರ್ಫ್ಯೂ ಇರುವುದಿಲ್ಲ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಎಂದಿನಂತೆ ಇರಲಿದೆ ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ.ಉಳಿದಂತೆ ಕೋವಿಡ್ ನಿಯಮಗಳು ಮುಂದುರೆಯಲಿದೆ. ಎಲ್ಲರೂ ಮಾರ್ಗಸೂಚಿ ಫಾಲೋ ಮಾಡಬೇಕು ಎಂದಿದ್ದಾರೆ.
Key words: Cancel – Weekend Curfew – State
ENGLISH SUMMARY…
State Govt. cancels weekend curfew
Bengaluru, January 21, 2022 (www.justkannada.in): The weekend curfew imposed by the State Government following increase in number of Corona cases has been cancelled as informed by Revenue Minister R. Ashok.
Speaking in Bengaluru today, he informed that this decision was taken at a meeting held with the experts and officials concerned, at the Chief Minister Basavaraj Bommai’s residential office ‘Krishna.’
Speaking to the media persons after the meeting Revenue Minister R. Ashok informed that the weekend curfew has been cancelled right from this week. However, the night curfew from 10.00 pm to 5.00 pm and other COVID rules continues to exist. “Everyone should follow the guidelines,” he informed.
Keywords: State Government/ Weekend curfew/ cancelled