ಮೈಸೂರು, ಆಗಸ್ಟ್ 26, 2023 (www.justkannada.in): ನಗರದ ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಸಮುದಾಯಶಾಸ್ತ್ರವಿಭಾಗ, ಜೆಎಸ್ ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದಿಂದ ಜಂಟಿಯಾಗಿ ಬಂಬೂ ಬಜಾರ್ ಜೆಎಸ್ ಎಸ್ ನಗರ ಆರೋಗ್ಯ ಕೇಂದ್ರದಲ್ಲಿ ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸುನಿಲ್ ಕುಮಾರ್, ಎಸ್ ಎಸ್ ಆಸ್ಪತ್ರೆಯ ಡಾ.ಕಿರಣ್, ಕ್ಯಾನ್ಸರ್ ತಜ್ಞರಾದ ಡಾ.ಜೈದೇವ್ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕ್ಯಾನ್ಸರ್ ತಜ್ಞರಾದ ಡಾ. ಕಿರಣ್ ಕುಮಾರ್ ಮಾತನಾಡಿ, ಧೂಮಪಾನದ ದುಷ್ಪರಿಣಾಮಗಳು, ಶ್ವಾಸಕೋಶದ ಕ್ಯಾನ್ಸರ್ ಹಾಗೂ ತಂಬಾಕು ತ್ಯಜಿಸುವ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.
ಡಾ. ಸುನಿಲ್ ಕುಮಾರ್ ಮಾತನಾಡಿದರು. ಜೆಎಸ್ಎಸ್ ನಗರ ಆರೋಗ್ಯ ಕೇಂದ್ರದ ಸಂಯೋಜಕಿ ಡಾ.ಅಮೋಘಶ್ರೀ, ಸಮುದಾಯಶಾಸ್ತ್ರ ವಿಭಾಗದ ಡಾ. ರಶ್ಮಿಎಸ್, ಸೀನಿಯರ್ ರೆಸಿಡೆಂಟ್, JSS ನಗರ ಆರೋಗ್ಯ ಕೇಂದ್ರದ ಮಹಿಳಾ ವೈದ್ಯಾಧಿಕಾರಿಗಳಾದ ಡಾ. ರಮ ಎಚ್.ಪಿ ಇತರರು ಉಪಸ್ಥಿತರಿದ್ದರು. 20 ಪೌರಕಾರ್ಮಿಕರುಮತ್ತು ಸ್ಥಳೀಯರು ಭಾಗವಹಿಸಿದ್ದರು.