ಓಎಲ್ಎಕ್ಸ್(olx) ವಂಚಕನ ಸೆರೆ

ಮೈಸೂರು, ಆಗಸ್ಟ್, 30, 2020(www.justkannada.in) : ಓಎಲ್ಎಕ್ಸ್(olx)ಜಾಹಿರಾತಿನಲ್ಲಿ ನಕಲಿ ಜಾಹಿರಾತನ್ನು ಪ್ರಕಟಿಸಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಯನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದು, 9 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

jk-logo-justkannada-logo

ಓಎಲ್ಎಕ್ಸ್(olx) ಜಾಹಿರಾತಿನಲ್ಲಿ ವಾಹನಗಳ ಮಾರಾಟಕ್ಕೆ ಪ್ರಕಟಿಸಿರುವ ಜಾಹಿರಾತುದಾರರನ್ನು ಭೇಟಿ ಮಾಡಿ ವಾಹನವು ತನ್ನ ಸಂಬಂಧಿಕರಿಗೆ ಬೇಕಾಗಿರುವುದಾಗಿ ನಂಬಿಸಿ ವಾಹನದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ನಿರುದ್ಯೋಗಿಗಳನ್ನು ಹುಡುಕಿ ಅವರಿಗೆ ಕೆಲಸ ಕೊಡಿಸುವ ನೆಪ ಹೇಳಿ ಅವರಿಂದಲೇ ಸಿಮ್ ಗಳನ್ನು ಖರೀದಿಸಿ. ಆ ಸಿಮ್ ಗಳನ್ನು ದುರ್ಭಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

Capture-olx-fraud

ಹೆಸರು ಬದಲಿಸಿ, ಸಿಮ್ ದುರ್ಬಳಕೆ ಮಾಡಿ ಮೋಸ

ವಾಹನಗಳ ಮಾಲೀಕರು ಓಎಲ್ಎಕ್ಸ್(olx) ನಲ್ಲಿ ಪ್ರಕಟಿಸಿರುವ ಬೆಲೆಗಿಂತ ಇನ್ನೂ ಕಡಿಮೆ ಬೆಲೆಗೆ ವಾಹನ ಮಾರಾಟಕ್ಕಿದೆ ಎಂದು ತನ್ನ ಹೆಸರು ಮರೆಮಾಚಿ ವಿವಿಧ ಹೆಸರುಗಳಲ್ಲಿ ಜಾಹಿರಾತನ್ನು ಓಎಲ್ಎಕ್ಸ್(olx)ನಲ್ಲಿ ಪ್ರಕಟಿಸಿ ಬೇರೆಯವರಿಂದ ಪಡೆದುಕೊಂಡಿರುವ ಸಿಮ್ ನಂಬರ್ ಗಳನ್ನು ಆರೋಪಿಯನ್ನು ಸಂಪರ್ಕಿಸಲು ಜಾಹಿರಾತಿನಲ್ಲಿ ಪ್ರಕಟಿಸಿ ಗ್ರಾಹಕರಿಗೆ ವಾಹನ ತನ್ನ ಸಂಬಂಧಿಕರ ವಾಹನವೆಂದು ನಂಬಿಸಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಹಣ ಪಡೆಯುತ್ತಿದ್ದಂತೆ ಕನಕಪುರ ತಾಲೂಕಿನ ಎನ್.ಮಂಜುನಾಥ್ ಪರಾರಿ

ಈ ವಾಹನವನ್ನು ಮಾರಾಟ ಮಾಡುವ ಮಾಲೀಕರಿಗೆ ವಾಹನ ಖರೀದಿಸುವವರ ಸಂಬಂಧಿಕನೆಂದು ನಟನೆ ನಂಬಿಸಿ, ಗ್ರಾಹಕರಿಗೆ ಮತ್ತು ವಾಹನದ ಮಾಲಿಕರಿಬ್ಬರಿಗೂ ನಂಬಿಕೆ ಬರುವಂತೆ ನಡೆದುಕೊಂಡು ವಾಹನ ಖರೀದಿಸಲು ಬರುವ ಗ್ರಾಹಕರಿಂದ ಹಣ ಪಡೆದು ಸ್ಥಳದಿಂದ ಅನುಮಾನ ಬಾರದಂತೆ ನುಣುಚಿಕೊಂಡು ಮೋಸ ಮಾಡುತ್ತಿದ್ದ ಆರೋಪಿ ಕನಕಪುರ ತಾಲೂಕಿನ ಆರೋಪಿ ಎನ್.ಮಂಜುನಾಥ್ ನನ್ನು ಬಂಧಿಸಲಾಗಿದೆ.

ಮೋಸದ ವ್ಯವಹಾರದಿಂದ 12 ಲಕ್ಷ ಗಳಿಸಿದ್ದ

ಆರೋಪಿಯು ಬೆಂಗಳೂರಿನ ತಿಲಕ್ ನಗರ, ಕೆ.ಆರ್.ಪುರಂ, ನೆಲಮಂಗಲ, ನಾಯಂಡಹಳ್ಳಿ ಮತ್ತು ಮೈಸೂರು  ಮುಂತಾದ ಕಡೆಗಳಲ್ಲಿ ವಂಚನೆ ಮಾಡಿ ಸಾರ್ವಜನಿಕರಿಂದ ಸುಮಾರು 12 ಲಕ್ಷ ರೂ. ಹಣಕ್ಕಿಂತ ಹೆಚ್ಚು ಮೋಸ ಮಾಡಿದ್ದಾನೆ. ಈತನ ಬಳಿಯಿದ್ದ 9 ಲಕ್ಷ ಮೌಲ್ಯದ ಚಿನ್ನದ ಒಡವೆಗಳು, ಒಂದು ಫಿಯಟ್ ಕಾರು, ಎರಡು ದ್ವಿಚಕ್ರ ವಾಹನಗಳು, ವಾಚ್, ಗೃಹ ಉಪಯೋಗಿ ವಸ್ತುಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

key words  :Capture-olx-fraud