ಬೆಳಗಾವಿ,ಮಾರ್ಚ್,15,2025 (www.justkannada.in): ಚಲಿಸುತ್ತಿದ್ದ ಕಾರಿನ ಮೇಲೆಯೇ ಕಾಂಕ್ರಿಟ್ ಮಿಕ್ಸರ್ ಲಾರಿ ಬಿದ್ದು ಪವಾಡ ದೃಶವಾಗಿ ಇಬ್ಬರು ಪಾರಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿ ಸರ್ವಿಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸದ್ಯ ಕಾರಿನಲ್ಲಿದ್ದ ಪರಪ್ಪ ಬಾಳೆಕಾಯಿ, ನಿಂಗಪ್ಪ ಕೊಪ್ಪದ ಇಬ್ಬರು ಅಪಾಯದಿಂದ ಪಾರಾಗಿದ್ದು ಬದುಕುಳಿದಿದ್ದಾರೆ.
ಕಾಂಕ್ರಿಟ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನೊಳಗೆ ಇಬ್ಬರು ಸಿಲುಕಿಕೊಂಡು ನರಳಾಡಿದ್ದರು. ತಮ್ಮನು ರಕ್ಷಿಸುವಂತೆ ಕೈ ಬೀಸಿ ಕೂಗಿಕೊಂಡರು. ಕೂಡಲೇ ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ಇಬ್ಬರನ್ನು ಹೊರತೆಗೆದು ರಕ್ಷಿಸಿದ್ದಾರೆ.
ಬೆಳಗಾವಿ ನಗರ ಹೊರವಲಯದ ಕೆಎಲ್‌ಇ ಆಸ್ಪತ್ರೆ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಕೆಎ -25 ಎಂಡಿ 6506 ನಂಬರಿನ ವೆಗನರ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
Key words: Concrete mixer, lorry ,falls , car, Accident