ಮನೆ ಕುಸಿದು 7 ಜನ ಮೃತಪಟ್ಟ ಪ್ರಕರಣ: ತಲಾ 5 ಲಕ್ಷ ರೂ. ಪರಿಹಾರ ಘೋಷಣೆ: ಬದುಕುಳಿದ ವ್ಯಕ್ತಿಗೆ ಅಭಯ ನೀಡಿದ ಸಿಎಂ ಬೊಮ್ಮಾಯಿ.

ಮೈಸೂರು,ಅಕ್ಟೋಬರ್,7,2021(www.justkannada.in): ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಮನೆ ಕುಸಿತ ದುರಂತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮನೆ ಕುಸಿತದಿಂದ ಸಂಭವಿಸಿರುವ ಅನಾಹುತದಿಂದ ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಮೃತಪಟ್ಟ ವ್ಯಕ್ತಿಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ  ಗೋವಿಂದ ಕಾರಜೋಳ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸಿಎಂ ಸಲಹೆ ನೀಡಿದ್ದಾರೆ. ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ  ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಬದುಕುಳಿದ ವ್ಯಕ್ತಿಗೆ ಅಭಯ ನೀಡಿದ ಸಿಎಂ.

ಬಡಾಲ ಅಂಕಲಗಿಯಲ್ಲಿ ಮನೆ ಬಿದ್ದು 7 ಜನ ಸಾವನ್ನಪ್ಪಿದ್ದು ಈ ದುರಂತದಲ್ಲಿ ಭೀಮಪ್ಪ ವ್ಯಕ್ತಿ ಬದುಕುಳಿದಿದ್ದಾರೆ. ಭೀಮಪ್ಪ ಸಾವನ್ನಪ್ಪಿರುವ ವ್ಯಕ್ತಿಗಳ  ಕುಟುಂಬದ ಸದಸ್ಯರಾಗಿದ್ದು,  ಭೀಮಪ್ಪನ ಜೊತೆ ದೂರವಾಣಿ ಮೂಲಕ  ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರ ನಿನ್ನ ಜೊತೆಗಿರುತ್ತದೆ. ಮೃತಪಟ್ಟಿರುವವರ ಅಂತ್ಯಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ತಕ್ಷಣವೇ ಪರಿಹಾರದ ಹಣವನ್ನು ತಲುಪಿಸಲಾಗುವುದು ಸರ್ಕಾರ ನಿನ್ನ ಜೊತೆ ಇರುತ್ತದೆ. ಯಾವುದೇ ಕಾರಣಕ್ಕೂ ದೃತಿಗೆಡಬೇಡ. ಎಂದು ಭೀಮಪ್ಪನಿಗೆ ಅಭಯ ನೀಡಿದರು.

Key words: Case -7 people-death-house –collapsed-5 lakh -compensation – CM Bommai

ENGLISH SUMMARY….

Seven people die in house collapse: CM announces Rs. 5 lakh compensation for each deceased
Mysuru, October 7,2021 (www.justkannada.in): Chief Minister Basavaraj Bommai has expressed his grief over the incident of a house collapse resulting in the death of seven persons of the same family, at Badagala Ankalagi in Belagavi Taluk.
The Chief Minister has announced a sum of Rs. 5 lakh compensation each to the kith of the deceased persons. The Chief Minister spoke to the Belagavi District In-charge Minister Govind Karajola over the phone regarding the incident and advised him to visit the place and undertake necessary measures.
Only one person named Bheemappa has survived the incident. Bheemappa is also one among the family of the deceased. The Chief Minister also spoke to him over the phone, and assured him that the government is with him. He has informed that he has spoken to the District Administration about the incident has asked to undertake all necessary measures for the cremation of the deceased persons. “I will ensure that the compensation amount is released immediately. Please don’t lose heart, the government will do whatever you need,” he assured the lone survivor Bheemappa.
Keywords: House collapse/ Anakalagi/ Belagavi/ 7 persons dead/ CM assures