ಬೆಂಗಳೂರು, ನವೆಂಬರ್ 15, 2019 (www.justkannada.in): ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿರುವ ರಾಹುಲ್ ದ್ರಾವಿಡ್ ವಿರುದ್ಧ ದಾಖಲಾಗಿದ್ದ ಹಿತಾಸಕ್ತಿ ಸಂಘರ್ಷ ಪ್ರಕರಣವನ್ನ ಬಿಸಿಸಿಐ ನೈತಿಕ ಅಧಿಕಾರಿ ನ್ಯಾಯಮೂರ್ತಿ ಡಿ.ಕೆ. ಜೈನ್ ರದ್ದುಗೊಳಿಸಿದ್ದಾರೆ.
ಎನ್ಸಿಎ ಅಧ್ಯಕ್ಷರಾಗಿರುವ ರಾಹುಲ್ ದ್ರಾವಿಡ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ ಪ್ರೈವೆಟ್ ಲಿಮಿಟೆಡ್ನ ಉಪಾಧ್ಯಕ್ಷ ಹುದ್ದೆಯಲ್ಲೂ ಇದ್ದಾರೆ.
ಇದು ಐಸಿಸಿ ನಿಯಮದ ಉಲ್ಲಂಘನೆಯಾಗಿದೆ ಅಂತ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ನ ಆಜೀವ ಸದಸ್ಯ ಸಂಜೀವ್ ಗುಪ್ತಾ ಬಿಸಿಸಿಐ ಎಥಿಕ್ಸ್ ಆಫೀಸರ್ಗೆ ದೂರು ನೀಡಿದ್ದರು.
ಈ ಕುರಿತು ರಾಹುಲ್ ದ್ರಾವಿಡ್ ನೀಡಿರುವ ಉತ್ತರ ಸಮಂಜಸವಾಗಿದ್ದು, ಇದರಲ್ಲಿ ಹಿತಾಸಕ್ತಿ ಸಂಘರ್ಷ ಕಂಡು ಬಂದಿಲ್ಲ. ಹೀಗಾಗಿ ಈ ದೂರನ್ನ ರದ್ದುಗೊಳಿಸುತ್ತಿದ್ದೇನೆ ಅಂತ ನ್ಯಾ.ಡಿ.ಕೆ. ಜೈನ್ ತಿಳಿಸಿದ್ದಾರೆ.