ಜಾತಿ ಗಣತಿ ವರದಿ ಜಾರಿ ಬಗ್ಗೆ ಚರ್ಚಿಸಲು ಏ.17ಕ್ಕೆ  ಸಚಿವ ಸಂಪುಟ ವಿಶೇಷ ಸಭೆಗೆ ನಿರ್ಧಾರ

ಬೆಂಗಳೂರು, ಏಪ್ರಿಲ್ 11,2025 (www.justkannada.in) :  ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ  ವರದಿಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ.

ಸಿಎಂ ಸಿದ್ದರಾಮಯ್ಯ  ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಮಂಡಿಸಲಾಗಿದ್ದು ಆದರೆ ಜಾತಿಗಣತಿ ವರದಿ ಬಗ್ಗೆ ಸಚಿವರು ಯಾವುದೇ ಪರ ವಿರೋಧ ಚರ್ಚೆ ಮಾಡಿಲ್ಲ.  ಕೇವಲ ವರದಿ ಮಂಡಿಸಲಾಗಿದೆ ಎನ್ನಲಾಗಿದೆ. ಜಾತಿ ಗಣತಿ ವರದಿ ಅನುಷ್ಟಾನ ಕುರಿತು ಬಗ್ಗೆ ಚರ್ಚಿಸಲು ಏಪ್ರಿಲ್ 17ಕ್ಕೆ ಸಚಿವ ಸಂಪುಟ ವಿಶೇಷ ಸಭೆ ಕರೆಯಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಲಕೋಟೆ ಓಪನ್ ಮಾಡಿದ ನಂತರ ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿಎಂ ಸಿದ್ದರಾಮಯ್ಯ, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ತೀರ್ಮಾನ ಮಾಡಿದ್ದಾರೆ. ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದ್ದು,  ಆ ಸಭೆಯಲ್ಲಿ ಜಾತಿ ಗಣತಿ ವಿಚಾರವಾಗಿ ತೀರ್ಮಾನ ಕೈಗೊಳ್ಳಬಹುದು ಎನ್ನಲಾಗಿದೆ.

Key words: Cabinet, special meeting, April 17, caste census report