ಮಂಡ್ಯ, ಅಕ್ಟೋಬರ್,11,2023(www.justkannada.in): ರಾಜ್ಯದಲ್ಲಿ ಮಳೆಕೊರತೆಯಾಗಿ ಬರಗಾಲ ಆವರಿಸಿ ಸಂಕಷ್ಟದಸ್ಥಿತಿ ಇದ್ದರೂ ಸಹ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರಾಜ್ಯ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ನಮ್ಮವರು ಸರಿಯಾಗಿ ಮನವರಿಕೆ ಮಾಡಿಕೊಟ್ಟಿಲ್ಲ. ದೇವರ ದಯೆಯಿಂದ ಮಳೆ ಬಂದು ಕೆಆರ್ ಎಸ್ ಜಲಾಶಯ 100 ಅಡಿ ಗಡಿ ತಲುಪಿದೆ. ಎರಡೂ ಸರ್ಕಾರ ಪರಸ್ಪರ ಕುಳಿತು ಮಾತನಾಡಬೇಕು. ಮಾತನಾಡಿದ ಮಾತ್ರ ಸಮಸ್ಯೆ ಬಗೆಹರಿಸಬಹುದು ಹರಿಯುವ ನೀರನ್ನ ಬಿಡಲ್ಲ ಎಂದು ಹೇಳಲು ಆಗಲ್ಲ ಎಂದರು.
Key words: Cauvery- dispute- not –convincing- properly- MP- Sumalatha Ambarish.