ನವದೆಹಲಿ,ಸೆಪ್ಟಂಬರ್,6,2023(www.justkannada.in): ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆ ಸೆಪ್ಟಂಬರ್ 21ಕ್ಕೆ ಮುಂದೂಡಿದೆ.
ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ವಕೀಲ ಮುಕುಲ್ ರೋಹ್ಟಗಿ ಅರ್ಜಿ ವಿಚಾರಣೆ ಪ್ರಸ್ತಾಪಿಸಿದರು. ಆದರೆ ಜಡ್ಜ್ ರಜೆ ಹಿನ್ನೆಲೆ ವಿಚಾರಣೆಯನ್ನ ಸೆಪ್ಟಂಬರ್ 21ಕ್ಕೆ ಮುಂದೂಡಿಕೆ ಮಾಡಲಾಗಿದೆ. ಅಂದೇ ರೈತ ಸಂಘ ಸಲ್ಲಿಸಿರುವ ಅರ್ಜಿಯೂ ಸಹ ವಿಚಾರಣೆಗೆ ಬರಲಿದೆ.
ಇದರಿಂದಾಗಿ ಕರ್ನಾಟಕಕ್ಕೆ ಸಂಕಷ್ಟ ಎದುರಾಗಿದ್ದು ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಲಾಗುತ್ತಿದೆ. ಸುಪ್ರೀಂ ವಿಚಾರಣೆವರೆಗೆ ನೀರು ಹರಿಸಿದರೇ ಕೆಆರ್ ಎಸ್ ನೀರಿನ ಮಟ್ಟ ಮತ್ತಷ್ಟು ಕುಸಿದು ರಾಜ್ಯದ ರೈತರಿಗೆ ಆತಂಕ ಶುರುವಾಗಲಿದೆ.
Key words: Cauvery- water- dispute-Supreme Court -adjourned -hearing – September 21.