ನವದೆಹಲಿ,ಮೇ,28,2019(www.justkannada.in): ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಬೇಕು ಎಂದು ಆದೇಶ ಹೊರಡಿಸಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೆಲವು ಷರತ್ತು ವಿಧಿಸಿದ್ದು, ಇದರಿಂದ ರಾಜ್ಯಕ್ಕೆ ಸ್ವಲ್ಪ ಆತಂಕ ದೂರ ಮಾಡಿದೆ.
ಹೌದು, ಒಳಹರಿವು ಹೆಚ್ಚಾದ್ರೆ ಮಾತ್ರ ನೀರು ಕೊಡಿ ಇಲ್ಲವಾದರೇ ನೀರು ಬಿಡುವ ಅವಶ್ಯಕತೆ ಇಲ್ಲ ಎಂದು ಪ್ರಾಧಿಕಾರ ಸ್ಪಷ್ಟವಾಗಿ ಹೇಳಿದೆ. ಜಲಾಶಯಗಳಲ್ಲಿ ಈಗ ಸಂಗ್ರಹವಾಗಿರುವ ನೀರು ಬಿಡುವ ಅಗತ್ಯವಿಲ್ಲ. ಒಂದು ವೇಳೆ ಒಳಹರಿವು ಹೆಚ್ಚಾಗಿ ನೀರು ಸಂಗ್ರಹವಾದರೇ ಮಾತ್ರ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತಿಳಿಸಿದೆ.
ಸಭೆ ಬಳಿಕ ಮಾತನಾಡಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷ ಮಸೂದ್ ಹುಸೇನ್, ಮಾನ್ಸೂನ್ ಆಧರಿಸಿ ಬಿಳಿಗುಂಡ್ಲು ಮೂಲಕ ನೀರು ಹರಿಸಬೇಕು. ಜೂನ್ ತಿಂಗಳಲ್ಲಿ ನೀರು ಹರಿಸಲು ಕರ್ನಾಟಕಕ್ಕೆ ಕಷ್ಟದ ಪರಿಸ್ಥಿತಿ. ಈ ಬಾರಿ ಮುಂಗಾರು ಚೆನ್ನಾಗಿ ಆಗುವ ನಿರೀಕ್ಷೆ ಇದೆ. ಉತ್ತಮ ಮುಂಗಾರು ಬಂದ್ರೆ ಮೂರು ಹಂತಗಳಲ್ಲಿ ನೀರು ಹರಿಸುತ್ತೇವೆ ಎಂದು ಪ್ರಾಧಿಕಾರದ ಆದೇಶಕ್ಕೆ ಕರ್ನಾಟ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.
ಒಳಹರಿವು ಹೆಚ್ಚಾದರೇ ಮಾತ್ರ ನೀರು ಬಿಡಿ ಎಂದು ವಿಧಿಸಿರುವ ಷರತ್ತಿನಿಂದ ಕಾವೇರಿ ಕೊಳ್ಳದ ರೈತರಿಗೆ ಮತ್ತು ಬೆಂಗಳೂರು ಕುಡಿಯುವ ನೀರು ಬಳಸುವವರಿಗೆ ನಿರಾಳವಾಗಿದೆ.
Key words: Water is only released as inflows increase. The state government has agreed to order the Cauvery Water Authority Authority.
#caveridispute #state government # CauveryWaterManagementAuthority