ಮೈಸೂರು,ಸೆ,3,2019(www.justkannada.in): ಈಶಾ ಫೌಂಡೇಶನ್ ವತಿಯಿಂದ ನದಿಗಳ ರಕ್ಷಣೆ ಜಾಗೃತಿ ಆಂದೋಲನ ಕಾವೇರಿ ಕೂಗು ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.
ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಕಾವೇರಿ ಕೂಗು ಅಭಿಯಾನಕ್ಕೆ ಚಾಲನೆ ನೀಡಿದರು. ಬೈಕ್ ಏರಿ ಆಂದೋಲನ ಆರಂಭಿಸುವ ಮೂಲಕ ಸದ್ಗುರು ಜಗ್ಗಿ ವಾಸುದೇವ್ ತಲಕಾವೇರಿಯಿಂದ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಬೈಕ್ ರ್ಯಾಲಿಯಲ್ಲಿ ನಟಿ ಶ್ರೀ ನಿಧಿ ಶೆಟ್ಟಿ, ನಟರಾದ, ರಕ್ಷಿತ್ ಶೆಟ್ಟಿ, ದಿಗಂತ್, ಶಶಿ ಮೊದಲಾದವರು ಪಾಲ್ಗೊಂಡು ಬೈಕ್ ರೈಡ್ ಮಾಡಿದರು. ಕಾವೇರಿ ಕೂಗು ಬೈಕ್ ಜಾಥಾದಲ್ಲಿ ನೂರಾರು ಬೈಕರ್ ಗಳು ಪಾಲ್ಗೊಂಡಿದ್ದರು. ಕಾವೇರಿ ಕೂಗು ಬೈಕ್ ಜಾಥಾಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ ಜಿ ಬೋಪಯ್ಯ ಸೇರಿದಂತೆ ಜನಪ್ರತಿನಿಧಿಗಳು ಸಾಥ್ ನೀಡಿದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಜಗ್ಗಿ ವಾಸುದೇವ ಅವರ ಕಾವೇರಿ ಕೂಗು ಒಂದು ಅತ್ಯದ್ಭುತ ಕಾರ್ಯಕ್ರಮ. ದೇಶದ ನದಿ, ಪರಿಸರ ಉಳಿಸಲು ಎಲ್ಲಾ ಸಾಧು ಸಂತರು ಕೆಲಸ ಮಾಡ್ತಿದಾರೆ. ಅವರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಖಂಡಿತವಾಗಿ ಸಾಥ್ ನೀಡುತ್ತದೆ. ಸದ್ಗುರು ಜಗ್ಗಿ ವಾಸುದೇವ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಸರ್ಕಾರವು ಸದ್ಗುರು ಅವರ ಕಾವೇರಿ ಕೂಗು ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ. ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಸದ್ಗುರುಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
ಕಾವೇರಿ ಕೊಳ್ಳದ ಪ್ರದೇಶದಲ್ಲಿ ಮರ ಗಿಡ ನೆಡಬೇಕು ಎಂಬ ಯೋಜನೆ ಬಹಳ ಒಳ್ಳೆಯದು. ದೇಶದ ಎಲ್ಲಾ ನದಿಗಳನ್ನು ರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯ, ಅದನ್ನು ಮಾಡಲು ಎಲ್ಲರೂ ಕೈಜೋಡಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
Key words: caveri koogu-campaign-jaggu vasudev-Actor- actresses –participated-bike rally