ಬೆಳಗಾವಿ,ಡಿಸೆಂಬರ್,20,2022(www.justkannada.in): ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಆರೋಪಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಬಿಜೆಪಿ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಡಿ.ಕೆ ಶಿವಕುಮಾರ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಹಿಂದೆ ಜನಾರ್ಧನ ರೆಡ್ಡಿ ಮೇಲೆ ದಾಳಿಯಾಗಿತ್ತು ಆಗ ಯಾರ ಪ್ರೇರಣೆಯಿಂದ ಸಿಬಿಐ ದಾಳಿಯಾಗಿತ್ತು..? ಎಂದು ಪ್ರಶ್ನಿಸಿದರು.
ಸಿಬಿಐ ದಾಳಿಯಾಗಿದ್ದಕ್ಕೆ ಪದೇ ಪದೇ ಬಿಜೆಪಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಸಿಬಿಐ ಸ್ವತಂತ್ರ ಸಂಸ್ಥೆ ಡಿಕೆ ಶಿವಕುಮಾರ್ ಆರೋಪ ಸರಿಯಲ್ಲ ಎಂದು ಕಿಡಿಕಾರಿದರು.
Key words: CBI-attack- – DK Shivakumar- Minister -R. Ashok.