CBI ದಾಳಿ @AIISH, ಮೈಸೂರಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ..!

CBI, inquiry, AllSH, Mysore

 

ಮೈಸೂರು, ಮಾ.28, 2024 : (www.justkannada.in news)  ಕೇಂದ್ರ ಸರಕಾರದ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಕಡತಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಇಂದು ಬೆಳಗ್ಗೆ ೧೦.೩೦ ರ ಸುಮಾರಿಗೆ ಮೂರು ವಿವಿಧ ವಾಹನಗಳಲ್ಲಿ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ, ಆಯಿಷ್‌ ನ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿತು ಎನ್ನಲಾಗಿದೆ.

ಜಸ್ಟ್‌ ಕನ್ನಡ ಗೆ ಲಭಿಸಿದ ಮಾಹಿತಿ ಪ್ರಕಾರ, ಆಯಿಷ್‌ ನ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗ, ಎಲೆಕ್ಟ್ರಿಕಲ್‌  ಹಾಗೂ ಕಂಪ್ಯೂಟರ್‌ ಸೆಕ್ಷನ್‌ ಗಳಿಗೆ ತೆರಳಿ ಪರಿಶೀಲನೆ ನಡೆಸಿದೆ. ಜತೆಗೆ ಅಗತ್ಯ ಕಡತಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಅವರು ರಜೆ ಮೇಲೆ ತೆರಳಿರುವ ಕಾರಣ, ಡಾ. ಮಂಜುಳಾ ಅವರು ಇಂದು  ಪ್ರಭಾರಿ ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದರು. ನಿರ್ದೇಶಕರ ಕಚೇರಿಗೂ ತೆರಳಿದ ಸಿಬಿಐ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸಿದರು.

ಇದೇ ವೇಳೆ ಆಯಿಷ್‌ ನ ಡೀನ್‌ (ಮೂಲಸೌಕರ್ಯ ವಿಭಾಗ) ಡಾ. ಅಜೀಶ್‌ ಅಬ್ರಹಾಂ,  ಮುಖ್ಯ ಆಡಳಿತಾಧಿಕಾರಿ ಎಸ್.ರಾಮ್‌ ಕುಮಾರ್‌ ಹಾಗೂ ಮುಖ್ಯ ಲೆಕ್ಕಾಧಿಕಾರಿ ರವಿಕುಮಾರ್‌ ಅವರ ಕಚೇರಿಗೂ ಸಿಬಿಐ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿತು ಎನ್ನಲಾಗಿದೆ.

ದಾಳಿ ಯಾಕೆ :

ಸಿಬಿಐ ಅಧಿಕಾರಿಗಳ ತಂಡ, ಆಯಿಷ್‌ ನ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿತು

ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕಿ ಡಾ.ಕೆ.ರಾಜಲಕ್ಷ್ಮೀ ಎಂಬುವವರು ಈ ಹಿಂದೆ ೨೦೨೨ ರಲ್ಲಿ ಆಯಿಷ್‌ ಬಿರುದ್ಧ ಕೇಂದ್ರ ಸಚಿವಾಲಯಕ್ಕೆ ದೂರು ನೀಡಿದ್ದರು. ಸಂಸ್ಥೆಯಲ್ಲಿನ ಅವ್ಯವಹಾರದ ಬಗ್ಗೆ ದೂರಿನಲ್ಲಿ ಆರೋಪಿಸಿದ್ದರು. ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂ. ನಷ್ಟವಾಗಿದೆ ಎಂದು ಗಮನ ಸೆಳೆದಿದ್ದರು. ಈ ಬಗ್ಗೆ ಪತ್ರಿಕಾಗೋಷ್ಠಿ ಸಹ ನಡೆಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೂರನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಿದೆ. ಇದರ ಅಂಗವಾಗಿ ಸಿಬಿಐ ಅಧಿಕಾರಿಗಳು ಇಂದು ಆಯಿಷ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಎಂದು ಮೂಲಗಳು ತಿಳಿಸಿವೆ.

ತಡರಾತ್ರಿ ತನಕ ನಡೆದ ಶೋಧ : 

ಸಿಬಿಐ ಅಧಿಕಾರಿಗಳ ತಂಡ ಇಂದು ತಡರಾತ್ರಿ ತನಕ ಆಯಿಷ್‌ ಸಂಸ್ಥೆಯಲ್ಲಿ ಪರಿಶೀಲನೆ ನಡೆಸಿದ್ದು ವಿಶೇಷ. ಅಧಿಕಾರಿಗಳು ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕುವುದರ ಜತೆಗೆ ಕಡತಗಳನ್ನು ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

 

ಮೈಸೂರಿನ ಐಶ್(AIISH)  ಉದ್ಯೋಗಿ ಅನುಮಾನಸ್ಪದವಾಗಿ ಸಾವು.

 

ಕರೆ ಸ್ವೀಕರಿಸಲಿಲ್ಲ : 

ಸಿಬಿಐ ಅಧಿಕಾರಿಗಳ ದಾಳಿ ಬಗ್ಗೆ ಆಯಿಷ್‌ ಸಂಸ್ಥೆ ಮುಖ್ಯಸ್ಥರನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಜಸ್ಟ್‌ ಕನ್ನಡ ನಡೆಸಿದ ಪ್ರಯತ್ನ ವಿಫಲ. ಈ ಬಗ್ಗೆ ಸಂಸ್ಥೆ ನಿರ್ದೇಶಕರು ಹಾಗೂ ಪ್ರಭಾರಿ ನಿರ್ದೇಶಕರಿಗೆ ಕರೆ ಮಾಡಿ ಸಂಪರ್ಕಕ್ಕೆ ಯತ್ನಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

Key words :  CBI,  inquiry, AllSH, Mysore

ENGLISH SUMMARY : 

CBI inquiry at AllSH, Mysore :

A former professor of the Mysuru-based All India Institute of Speech and Hearing (AIISH) has demanded an inquiry by the Central Bureau of Investigation (CBI) against the present director of the prestigious institute. K Rajalakshmi, former professor of audiology sought CBI inquiry.

 

Dr. Pushpavathi, AIISH Director

“Instead of focusing on academics, the AIISH director is into construction and contractrelated works. Thus, not only the institute ranking has come down to B++, from A, but research-related works have also suffered. Due to her lack of administration skills, the employees are put into a lot of trouble. It has even forced some of them to take voluntary retirement.”

the works related to the of Excellence, there is a misuse of money, includ- purchase of lift, furniture, cabling work, sound proof and other works. There misuse of money in the purchase of DG generator, set genetic labs, purchase of chemicals and other related equipment. So, I request the to get details of the works related to computer networking, LAN network, CCTV cameras, WiFi network at AIISH main and Panchavati campus, executed from January 1 to March 31, 2022,”