ಮೈಸೂರು,ಜನವರಿ,10,2021(www.justkannada.in) : ಫೋನ್ ಕದ್ದಾಲಿಕೆ ಸಂಬಂಧಿಸಿದಂತೆ ಸಿಬಿಐ ಚೋರ್ ಬಚಾವ್ ಇನ್ಸ್ಟಿಟ್ಯೂಷನ್ ಆಗಿದೆ. ತಾವೇ ಚಾರ್ಜ್ ಶೀಟ್ ಸಲ್ಲಿಸಬಹುದಿತ್ತು, ಸರ್ಕಾರವನ್ನು ಕೇಳುವ ಅವಶ್ಯಕತೆ ಇರಲಿಲ್ಲ. ಇದೀಗ ಫೋನ್ ಕದ್ದಾಲಿಕೆ ಕುರಿತ ಸಿಬಿಐ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಲು ಹೊರಟಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಆರೋಪಿಸಿದರು.
ಭಾನುವಾರ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ೨೦೧೮-೧೯ರ ಅವಧಿಯಲ್ಲಿ ನಡೆದ ಫೋನ್ ಕದ್ದಾಲಿಕೆ ವಿಚಾರ. ಫೋನ್ ಕದ್ದಾಲಿಕೆ ವಿಚಾರಣೆಯ ಆರೋಪಪಟ್ಟಿಯನ್ನು ಸಿಬಿಐ ತಯಾರಿ ಮಾಡಿದೆ. ಆದರೆ, ಸಿಬಿಐ ವರದಿಯನ್ನು ಸಿಎಂ ತಿರಸ್ಕರಿಸಲು ಮುಂದಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಮೀಷನರ್ ಆಗಿದ್ದ ಅಲೋಕ್ ಕುಮಾರ್ ಅವಧಿಯಲ್ಲಿ ಅವರ ನಿರ್ದೇಶನದಂತೆ ಫೋನ್ ಕದ್ದಾಲಿಕೆ ಮಾಡಿರುವುದಾಗಿ ಅಧಿಕಾರಿಗಳೇ ತಪ್ಪೊಪ್ಪಿಕೊಂಡಿದ್ದಾರೆ. ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ, ಬಲವಾದ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ಅದಲ್ಲದೇ, ಮೂರು ಜನರ ಮೇಲೆ ಆರೋಪ ಪಟ್ಟಿ ಸಿದ್ಧಪಡಿಸಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲು ಎರಡು ತಿಂಗಳ ಹಿಂದೆ ಸರ್ಕಾರದ ಅನುಮತಿ ಕೋರಿದೆ ಎಂದು ಸಿಬಿಐ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರ ಸಿಬಿಐ ವರದಿಯಲ್ಲಿ ಏನಿದೆ ಅನ್ನುವುದನ್ನು ಬಹಿರಂಗಪಡಿಸಬೇಕು
ಸರ್ಕಾರ ಸಿಬಿಐ ವರದಿಯಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು. ಸಿಬಿಐ ವರದಿಯಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಿಸಬೇಕು. ಕದ್ದಾಲಿಕೆ ಹಿಂದೆ ಯಾರು ಇದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಯುವರಾಜ್ ಸ್ವಾಮಿ ಪ್ರಕರಣ ವಿರುದ್ಧ ಕಿಡಿ
ಯುವರಾಜ್ ಸ್ವಾಮಿ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರಕ್ಕೆ ಬದ್ಧತೆ ಇದ್ದರೆ ಆತನ ತಪ್ಪನ್ನ ಜನರಿಗೆ ತಿಳಿಸಬೇಕು. ಈ ಪ್ರಕರಣದಲ್ಲಿ ೮ ರಿಂದ ೧೦ ನಟಿಯರು ಭಾಗಿಯಾಗಿದ್ದಾರೆ. ಕೇವಲ ರಾಧಿಕ ಕುಮಾರಸ್ವಾಮಿ ಮಾತ್ರ ಏಕೆ ಟಾರ್ಗೆಟ್ ಮಾಡ್ತ ಇದ್ದಾರೆ. ಇದರಲ್ಲಿ ಬಿಜೆಪಿಯ ಹಲವು ನಾಯಕರು ಭಾಗಿಯಾಗಿದ್ದಾರೆ ಎಂದು ಕಿಡಿಕಾರಿದರು.
ಡ್ರಗ್ ಕೇಸಲ್ಲಿ ಸಂಜನಾ ರಾಗಿಣಿ ಮುಂದಿಟ್ಟುಕೊಂಡು ಪ್ರಮುಖ ಆರೋಪಿಗಳನ್ನ ಉಳಿಸಿಲಾಗಿದೆ. ಇವನ ಪ್ರಕರಣದಲ್ಲೂ ಬಿಜೆಪಿ ಇದೇ ಕೆಲಸ ಮಾಡುತ್ತಿದೆ. ಪ್ರಕರಣದಲ್ಲಿ ರಾಧಿಕ ಕುಮಾರಸ್ವಾಮಿ ಆಡಿಯೋ ಮಾತ್ರ ಏಕೆ ಲೀಕ್ ಆಯ್ತು. ತನಿಖೆ ಹಂತದಲ್ಲಿರುವಾಗ ಆಡಿಯೋ ಲೀಕ್ ಆಗೋಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಮಾಧ್ಯಮವನ್ನಿಟ್ಟುಕೊಂಡು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಯುವರಾಜ್ ಸ್ವಾಮಿ ಪಕ್ಕ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದು, ಇಂತಹವರನ್ನ ದೇಶದ ಹಲವು ಕಡೆ ಬಿಟ್ಟು ದೇಶದಾದ್ಯಂತ ಇಂತಹ ಕೆಲಸಗಳನ್ನ ಆರ್ ಎಸ್‌ಎಸ್ ಮಾಡಿಸುತ್ತಿದೆ. ಮಂತ್ರಿಗಿರಿ, ಬೋರ್ಡ್ ಚೇರ್ಮಾನ್ ಹುದ್ದೆಗಳನ್ನ ಹಲವರಿಗೆ ಕೊಡಿಸಿರೋದೆ ಇವನಾಗಿದ್ದು, ಇವನಿಂದ ೪೦೦ ಕೋಟಿ ವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಅಮಿತ್ ಷಾ ಜೊತೆಗೆ ನೇರ ಸಂಪರ್ಕದಲ್ಲಿ ಈತ ಇದ್ದಾನೆ. ಮಾಜಿ ಜಡ್ಜ್ ಒಬ್ಬರಿಂದ ರಾಜ್ಯಪಾಲರನ್ನಾಗಿ ಮಾಡಿಸುವುದಾಗಿ ಹೇಳಿ ೮.೨೭ ಹಣ ವಸೂಲಿ ಮಾಡಿದ್ದಾರೆ. ಇಷ್ಟು ಸಾಕ್ಷ್ಯಗಳಿದ್ದರೂ, ಬಿಜೆಪಿಯವರು ನಮಗೂ ಆತನಿಗೂ ಸಂಬಂಧವಿಲ್ಲ ಅಂತಾರೆ. ಕೇಳಿದ್ರೆ ಯಾರೋ ಒಬ್ಬ ಹಿಂದೆ ಸಿಕ್ಕಿದ್ದ. ಆತನ ಮನೆಗೆ ಭೇಟಿ ಮಾಡಿ ಊಟ ಮಾಡಿದ್ವಿ ಅಂತ ಹೇಳ್ತಾರೆ. ಪರಿಚಯ ಇಲ್ಲದ ಮೇಲೆ ಯಾರೋ ಬೀದಿಯಲ್ಲಿ ಹೋಗುವವರ ಮನೆಗೆ ಊಟಕ್ಕೆ ಹೋಗಿದ್ರ? ಇದೆಲ್ಲ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಇವನಿಗೂ ಬಿ.ಎಲ್.ಸಂತೋಷ್ ಅವರಿಗೂ ಇರುವ ಸಂಬಂಧವೇನು?, ಅವರಿಬ್ಬರ ಪೋನ್ ಕಾಲ್ ಯಾಕೆ ಬಿಡುಗಡೆಯಾಗಿಲ್ಲ. ಈತನಿಗೆ ರಾಜ್ಯದ ಪ್ರಮುಖರ ಜೊತೆ ಸಂಬಂಧವಿದೆ. ಅವರಿಗೆಲ್ಲ ಈತ ಹೇಗೆ ಪರಿಚಯ ಎಲ್ಲಾ ತನಿಖೆಯಾಗಬೇಕು. ಕೇವಲ ರಾಧಿಕ ಕುಮಾರಸ್ವಾಮಿ ಹೆಸರು ಹೇಳದೆ ಇವನೊಂದಿಗೆ ಸಂಬಂಧವಿರುವ ಎಲ್ಲರನ್ನ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
key words : CBI-Chor Bachav-Institution-KPCC-spokesman-M.Lakshan-Accused