ಬೆಂಗಳೂರು,ಮಾರ್ಚ್,28,2021(www.justkannada.in) : ಎಸ್‍ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆ ನಡೆಸಲು ಬಿಡಿ. ಯಾರು, ಯಾವುದೇ ರೀತಿಯ ಹೇಳಿಕೆ ಕೊಟ್ಟರೂ ಎಸ್‍ಐಟಿ ತನಿಖೆ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ಏನೇ ಹೇಳಿಕೆ ಕೊಟ್ಟರೂ ಪೊಲೀಸರು ಸರಿಯಾದ ರೀತಿಯಲ್ಲಿ ಕ್ರಮಬದ್ದವಾಗಿ ಸಿ.ಡಿ ಪ್ರಕರಣದ ತನಿಖೆ ನಡೆಸಿ ಸತ್ಯಾಂಶ ಕಂಡುಹಿಡಿಯಲಿದ್ದಾರೆ. ಆಡಿಯೋ, ವಿಡಿಯೋ ಸಿ.ಡಿ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತದೆ. ಅದಕ್ಕೊಂದು ಪದ್ದತಿ, ವ್ಯವಸ್ಥೆಯಿದೆ. ಅದೇ ರೀತಿ ತನಿಖೆ ನಡೆದು ಸತ್ಯಾಸತ್ಯತೆ ಕಂಡುಹಿಡಿಯಲಾಗುತ್ತದೆ ಎಂದಿದ್ದಾರೆ.
ಸಿ.ಡಿಯಲ್ಲಿ ಇದ್ದಾರೆ ಎನ್ನಲಾದ ಯುವತಿಗೆ ಈಗಾಗಲೇ ಐದು ನೋಟಿಸ್
ಸಿ.ಡಿಯಲ್ಲಿ ಇದ್ದಾರೆ ಎನ್ನಲಾದ ಯುವತಿಗೆ ಈಗಾಗಲೇ ಐದು ನೋಟಿಸ್ ನೀಡಲಾಗಿದ್ದು, ಭದ್ರತೆ ಕೊಡುವ ಭರವಸೆ ನೀಡಿದ್ದೇವೆ. ಇದ್ದಲ್ಲಿಯೇ ಭರವಸೆ ಕೊಡುತ್ತೇವೆ. ಅಲ್ಲದೆ ಆಕೆಯ ಕೋರಿಕೆಯಂತೆ ಅವರ ತಂದೆತಾಯಿಗೂ ಭದ್ರತೆ ಕೊಟ್ಟಿದ್ದೇವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೆನಪಿನ ಶಕ್ತಿ ಕಡಿಮೆ
ಪ್ರತಿಭಟನೆಗಳ ಬಗ್ಗೆ ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಏನೇ ಆದರೂ ಎಸ್‍ಐಟಿ ಮೇಲೆ ಪ್ರಭಾವ ಬೀರಲು ಆಗುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಕೇಳಿ ಬಂದ ಪ್ರಕರಣದ ಬಗ್ಗೆ ಸಂತ್ರಸ್ತೆಯೇ ದೂರು ಕೊಟ್ಟರೂ ಏನಾಯಿತು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಪೊಲೀಸರ ನೈತಿಕತೆ ಕುಗ್ಗಿಸುವಂತಹ ಕೆಲಸವನ್ನು ಯಾರು ಕೂಡ ಮಾಡಬಾರದು ಎಂದು ಹೇಳಿದ್ದಾರೆ.
key words : CD case-leave-investigate-Minister-Basavaraj Bommai