ಬೆಂಗಳೂರು,ಜನವರಿ,15,2021(www.justkannada.in) : ಕೆಲವರು ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡು ಸಿಎಂ ಯಡಿಯೂರಪ್ಪನವರಿಗೆ ಸಂಬಂಧಿಸಿದ ಸಿ.ಡಿ ಇದೆ ಎಂದು ಕಟ್ಟುಕಥೆ ಕಟ್ಟುತ್ತಿದ್ದಾರೆ. ಅಂತ ಸಿ.ಡಿ ಯಾರ ಬಳಿಯೂ ಇಲ್ಲ. ಇದೆಲ್ಲ ವದಂತಿ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಆರೋಪಿಸಿರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ ಯಾರ ಬಳಿಯೂ ಇಲ್ಲ. ಇದು ನೂರಕ್ಕೆ 100ರಷ್ಟು ಸುಳ್ಳು ಎಂದರು.
ಪಾದಯಾತ್ರೆ ಅಗತ್ಯವಿಲ್ಲ
ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಲು ನಡೆಸುತ್ತಿರುವ ಪಾದಯಾತ್ರೆಯ ಹಿಂದೆ ಯಾರಿದ್ದಾರೆಂದು ನಾನು ಹೇಳಬೇಕಾದ ಅಗತ್ಯವಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.
ನಾನು ಈ ಹಿಂದೆ ಪಾದಯಾತ್ರೆ ಕೈಗೊಳ್ಳಬೇಡಿ ಎಂದು ಸ್ವಾಮೀಜಿಗೆ ಮನವಿ ಮಾಡಿದ್ದೆ. ಬಳಿಕ ಸಿ.ಸಿ.ಪಾಟೀಲ್ ಕೂಡ ಶ್ರೀಗಳಿಗೆ ಪಾದಯಾತ್ರೆ ನಡೆಸಿದಂತೆ ಮನವಿ ಮಾಡಿದ್ದರು. ನಾವು ಶ್ರೀಗಳಿಗೆ ಹೇಳುವಷ್ಟು ದೊಡ್ಡವರಲ್ಲ ಎಂದು ಹೇಳಿದರು.
ಏಕಾಏಕಿ ಪಾದಯಾತ್ರೆ ಮಾಡಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಡ ಹಾಕುವುದು ಸರಿಯಲ್ಲ. ಈಗಾಗಲೇ ಸಿಎಂ ಯಡಿಯೂರಪ್ಪನವರು ನಮ್ಮ ಸಮುದಾಯವನ್ನು 2ಎಗೆ ಸೇರಿಸಲು ಒಪ್ಪಿಗೆ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ. ಅವರ ಮಾತಿನಲ್ಲಿ ಎಲ್ಲರೂ ನಂಬಿಕೆ ಇಡಬೇಕು ಎಂದು ತಿಳಿಸಿದರು.
key words : CD Fabrication-I don’t-have-CD-anyone-Minister- Murugesh Nirani