ಬೆಂಗಳೂರು,ಮಾರ್ಚ್,30,2021(www.justkannada.in): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಜಡ್ಜ್ ಮುಂದೆ ಹಾಜರಾಗಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು ಆ ಬಳಿಕ ಯುವತಿಯನ್ನ ಎಸ್ ಐಟಿ ವಿಚಾರಣೆಗೆ ಕರೆದೊಯ್ಯಲಾಗುತ್ತಿದೆ.
ಅಡುಗೋಡಿಯ ಟೆಕ್ನಿಕಲ್ ವಿಂಗ್ ಗೆ ಸಂತ್ರಸ್ತ ಯುವತಿಯನ್ನ ಪೊಲೀಸರು ಕರೆದೊಯ್ಯುತ್ತಿದ್ದು ಎಸ್ ಐಟಿ ಅಧಿಕಾರಿಗಳು ಯುವತಿಯನ್ನ ವಿಚಾರಣೆ ನಡೆಸಲಿದ್ದಾರೆ.
ಬಿಗಿ ಭದ್ರತೆಯೊಂದಿಗೆ ಗೌಪ್ಯವಾಗಿ ಸಂತ್ರಸ್ತ ಯುವತಿಯನ್ನ ಎಸಿಎಂಎಂ ಕೋರ್ಟ್ ಜಡ್ಜ್ ಎದುರು ಹಾಜರುಪಡಿಸಲಾಗಿತ್ತು. ವಸಂತನಗರದ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಯುವತಿ ಹೇಳಿಕೆ ನೀಡಿದರು.
Key words: CD The case- police -girl – SIT-investigation.