ಬೆಂಗಳೂರು,ಮಾರ್ಚ್,28,2021(www.justkannada.in) : ಸಿಡಿ ಪ್ರಕರಣ ಸರ್ಕಾರದ ವಾಸ್ತವಿಕ ಡ್ರಾಮಾ. ಕೇಸ್ ಮುಚ್ಚಿ ಹಾಕುವ ಯತ್ನ ನಡೆಯುತ್ತಿದ್ದು, ಸರ್ಕಾರವೇ ಇದರ ರಕ್ಷಣೆಗೆ ನಿಂತಿರುವುದನ್ನು ನೋಡಿದರೆ ಇದು ಸಿಡಿಗಳಿಂದ ಉಳಿದಿರುವ ಸರಕಾರ ಎನಿಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮಗಳ ವಯಸ್ಸಿನ ಹೆಣ್ಣು ಮಗಳಿಗಾದ ನೋವಿನ ಬಗ್ಗೆ ಸರ್ಕಾರ, ಎಸ್ ಐ ಟಿ ಯಾರೂ ಸಹ ಚರ್ಚೆ ಮಾಡುತ್ತಿಲ್ಲ. ಸರ್ಕಾರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಥವಾ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿಲ್ಲ ಎಂದು ಕಿಡಿಕಾರಿದರು.
ಅಕ್ರಮ ಚಟುವಟಿಕೆ ಮುಚ್ಚಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಯುವತಿಯ ರಕ್ಷಣೆಗೆ ನಾವು ನಿಲ್ಲಬೇಕಿದೆ. ಅದಕ್ಕಾಗಿ ಹೋರಾಟದ ಹಾದಿ ಹಿಡಿಯಬೇಕಿದೆ. ಬೇಕಿದೆ. ಎಸ್ ಐ ಟಿಗೆ ಒಂದು ಫ್ರೇಮ್ ವರ್ಕ್ ಇಲ್ಲ. ಇದನ್ನು ಯಾರು ನಿಂಯತ್ರಿಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಪ್ರಕರಣ ಮುಚ್ಚು ಹಾಕುವ ಕುತಂತ್ರ ನಡೆಯುತ್ತಿದೆ ಎಂದು ದೂರಿದರು.
ಯಾರೇ ಸಾಮಾನ್ಯ ವ್ಯಕ್ತಿ ಮಾಡಿದ್ದರೆ ಈ ವೇಳೆಗೆ ಜೈನಲಿನಲ್ಲಿರುತ್ತಿದ್ದ. ಗೃಹ ಸಚಿವರು ಕಾನೂನು ವ್ಯವಸ್ಥೆಯ ಕುರಿತು ಕೈಚೆಲ್ಲಿದ್ದಾರೆ. ಡಿ.ಕೆ.ಶಿ ಕುರಿತು ಅವಾಚ್ಯವಾಗಿ ಮಾತನಾಡಿರುವ ರಮೇಶ್ ಜಾರಕಿಹೊಳಿ ಎದುರಿಗೆ ಸಿಕ್ಕರೆ ಏನ್ ಹೇಳಬೇಕು ಹೇಳುತ್ತೇವೆ. ಕನಕಪುರಕ್ಕೆ ಬಂದಾಗ ನಾವು ನೋಡಿಕೊಳ್ತೇವೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
key words : CDs-Remaining-Government-D.K.Suresh-MP-Accused