ಎಲ್ಲರ ಸಹಕಾರದಿಂದ ಅರ್ಥಪೂರ್ಣ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆಚರಣೆ ಮಾಡೋಣ- ಸಚಿವ  ಡಾ.ನಾರಾಯಣಗೌಡ.

ಮಂಡ್ಯ, ಸೆಪ್ಟಂಬರ್,25,2021(www.justkannada.in): ಅಕ್ಟೋಬರ್ 9ರಿಂದ 3 ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಉತ್ಸವವನ್ನು ಸರಳವಾಗಿ ಹಾಗೂ ಅರ್ಧಪೂರ್ಣವಾಗಿ ಮಾಡಲು ಎಲ್ಲರ ಸಹಕಾರದಿಂದ ಆಚರಣೆ ಮಾಡೋಣ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಕೆ. ಸಿ. ನಾರಾಯಣಗೌಡ ಅವರು ತಿಳಿಸಿದರು.

ಇಂದು ಶೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಶೀರಂಗನಾಥಸ್ವಾಮಿ ಕಲ್ಯಾಣ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ನಾರಾಯಣಗೌಡ, ಶೀರಂಗಪಟ್ಟಣ ದಸರಾ ಮಹೋತ್ಸವ ಯಶಸ್ವಿಯಾಗಲು  ಸಂಘ ಸಂಸ್ಧೆಗಳು ಹಾಗೂ ಸಾರ್ವಜನಿಕರು  ಸಹಕರಿಸಬೇಕು ಎಂದು ಅವರು ತಿಳಿಸಿದರು.

ಅ.9ರಂದು ಕಿರಂಗೂರು ಬನ್ನಿಮಂಟಪದಿಂದ ಪಾರಂಪರಿಕ ದಸರಾ ಆಚರಣೆ ಜತೆಗೆ ದಸರಾ ಉತ್ಸವ ಹಲವು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ  ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಮೈದಾನ ತಲುಪಲಿದ್ದು ಜಂಭೂ ಸವಾರಿಗೆ ಆನೆಗಳ ಕರೆತರಲು ಪ್ರಯತ್ನ ಮಾಡಲಾಗುವುದು ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಗಳ ರೂಪುರೇಷೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೋಂದಿಗೆ ಚರ್ಚಿಸಲಾಗವುದು ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಕಳೆಗಟ್ಟಿಸಲು ವಿದ್ಯುತ್ ದೀಪಾಲಂಕಾರ, ಕಿರಂಗೂರು ಬನ್ನಿಮಂಟಪ ಹಾಗೂ ಶ್ರೀರಂಗಪಟ್ಟಣವನ್ನು ತಳಿರು ತೋರಣಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಿ ಅಲಂಕರಿಸಿ ದಸರಾ ಮೆರವಣಿಗೆ ಸಾಗುವ ಮಾರ್ಗವನ್ನು ಶುಚಿಗೊಳಿಸಿ ಅಣಿಗೊಳಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ಸ್ಥಳೀಯ ಕಲಾವಿದರಿಗೆ ಆಚರಣೆಯಲ್ಲಿ ಹೆಚ್ಚು ಆದ್ಯತೆ ಇರಲಿದ್ದು, ಜಾನಪದ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಲ್ಲಿ ಹಮ್ಮಿಕೊಳ್ಳಲಾಗುವುದು ಹಾಗೂ ಇನ್ನು ದೇಸಿ ಕ್ರೀಡೆಗಳಾದ ಕುಸ್ತಿಕಾಳಗ ಮತ್ತು ಕಬಡ್ಡಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದ್ದು ಯಾರೇ ಕೀಡಾಸಕ್ತರು ಭಾಗಿಯಾಗಬಹುದು ಎಂದು ಅವರು ಸಚಿವ ನಾರಾಯಣಗೌಡ ತಿಳಿಸಿದರು

ಈ ವೇಳೆ  ಜಿಲ್ಲಾಧಿಕಾರಿ ಎಸ್ . ಅಶ್ವತಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶ್ವಿನಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಪಾಂಡವಪುರ ಉಪ ವಿಭಾಗದೀಕಾರಿಗಳಾದ ಶಿವನಂದಮೂರ್ತಿ , ತಹಸೀಲ್ದಾರ್ ಶ್ವೇತಾ ಹಾಗೂ ಜಿಲ್ಲಾ ಮತ್ತು ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಜತೆಗಿದ್ದರು.

Key words:   celebrate -Srirangapatna Dasara- Mahotsav – cooperation –Minister- Dr. Narayana Gowda