ಕೊಡಗು,ಫೆಬ್ರವರಿ,13,2021(www.justkannada.in): ತಂದೆ ಕೊಡಿಸಿದ ಸ್ಕೂಟರ್ನಲ್ಲಿ ತಾಯಿಯೊಂದಿಗೆ ಭಾರತ ತೀರ್ಥಯಾತ್ರೆ ಮಾಡಿ ಸುದ್ದಿಯಾಗಿ ಆಧುನಿಕ ಶ್ರವಣಕುಮಾರ ಎಂದೇ ಖ್ಯಾತಿ ಗಳಿಸಿರುವ ಮೈಸೂರಿನ ಕೃಷ್ಣಕುಮಾರ್ ಈಗ ತಮ್ಮ ತಾಯಿಯೊಂದಿಗೆ ಕೊಡಗು ಜಿಲ್ಲೆಯ ಪ್ರವಾಸದಲ್ಲಿದ್ದಾರೆ.
ತಮ್ಮ ತಾಯಿ ಚೂಡಮಣಿಯವರ 71ನೇ ಹುಟ್ಟುಹಬ್ಬವನ್ನು ಆಚರಿಸೋಕೆ ಅಂತಾ ಕೃಷ್ಣಕುಮಾರ್ ಮಡಿಕೇರಿ ಪ್ರವಾಸ ಕೈಗೊಂಡಿದ್ದಾರೆ. ತನ್ನ ಪ್ರೀತಿಯ ತಾಯಿಯ ಬರ್ತ್ಡೇ ಹಿನ್ನೆಲೆ ತಲಕಾವೇರಿ, ಕುಶಾಲನಗರ, ಗೋಣಿಕೊಪ್ಪ, ಮಡಿಕೇರಿಯ, ಪ್ರವಾಸಿ ತಾಣ ಹಾಗೂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಮಡಿಕೇರಿಯಲ್ಲಿ ತಾವು ತಂಗಿದ್ದ ಹೋಮ್ ಸ್ಟೇನಲ್ಲಿ ಕೃಷ್ಣಕುಮಾರ್ ತಮ್ಮ ತಾಯಿಗೆ ಸಕ್ಕರೆ ತಿನ್ನಿಸಿ ಶುಭ ಕೋರಿದರು. ನಂತರ ತಾಯಿಯ ಆಶೀರ್ವಾದ ಪಡೆದು, ಸ್ಥಳೀಯರಿಗೆ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ತಾಯಿಯ ಜನ್ಮದಿನವನ್ನ ಆಚರಿಸಿದರು.
Key words: celebrated- his mother’s -birthday – Madikeri-mysore-krishnakumar-shravanakumar