ಎರಡು ಹೊಸ ಫೋರೆನ್ಸಿಕ್ ಲ್ಯಾಬ್‌ ಗಳಿಗೆ ಕರ್ನಾಟಕಕ್ಕೆ ಕೇಂದ್ರದಿಂದ 7 ಕೋಟಿ ರೂ. ಅನುದಾನ.

ಬೆಂಗಳೂರು, ಅಕ್ಟೋಬರ್ 27, 2022 (www.justkannada.in): ಕರ್ನಾಟಕದಲ್ಲಿ ವಶಪಡಿಸಿಕೊಂಡಿರುವಂತಹ ಮಾದಕವಸ್ತುಗಳ ಮಾದರಿಗಳ ತಪಾಸಣೆಗಾಗಿ ಎರಡು ಹೆಚ್ಚುವರಿ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದಿಂದ ರೂ.7 ಕೋಟಿ ಅನುದಾನ ಲಭಿಸಿದೆ.

ಸರಣಿ ಟ್ವೀಟ್‌ಗಳ ಮೂಲಕ ರಾಜ್ಯದ ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು, ಮಾದಕವಸ್ತುಗಳ ಮಾರಾಟದ ಮೂಲಕ ಕಾನೂನುಬಾಹಿರವಾಗಿ ಗಳಿಸಿರುವ ಆಸ್ತಿಯನ್ನು ರಾಜ್ಯ ಪೋಲಿಸ್ ಇಲಾಖೆ ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

“ಕರ್ನಾಟಕದಲ್ಲಿ ವಶಪಡಿಸಿಕೊಂಡಿರುವ ಮಾದಕವಸ್ತುಗಳ ಮಾದರಿಗಳ ಕ್ಷಿಪ್ರ ತಪಾಸಣೆಗಾಗಿ ಎರಡು ಹೆಚ್ಚುವರಿ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಇಲಾಖೆ ರೂ.7 ಕೋಟಿ ಹಣಕಾಸಿನ ನೆರವನ್ನು ಒದಗಿಸಿದೆ. ಇದಕ್ಕಾಗಿ ನಾನು ಕೇಂದ್ರದ ಸಂಬಂಧಪಟ್ಟ ಇಲಾಖೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರಾಜ್ಯದಲ್ಲಿ ಮಾದಕವಸ್ತುಗಳ ವಿರುದ್ಧದ ನಮ್ಮ ಹೋರಾಟ ಹಾಗೂ ಮಾದಕವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಲು ನಮ್ಮ ಇಲಾಖೆ ಬದ್ಧವಾಗಿದೆ,” ಎಂದು ತಮ್ಮ ಟ್ವೀಟ್‌ನಲ್ಲಿ ಸೂದ್ ಅವರು ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Center – Karnataka – two -new forensic- labs- grant-7 crore