ಬೆಂಗಳೂರು,ಜೂನ್,26,2023(www.justkannada.in): ಜನರಿಗೆ ತಲಾ 10 ಕೆಜಿ ಅಕ್ಕಿ ಕೊಡಲು ವಿಳಂಬ ಮಾಡುತ್ತಿರುವುದಕ್ಕೆ ಕಿಡಿಕಾರುತ್ತಿರುವ ಬಿಜೆಪಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಅನ್ನಭಾಗ್ಯ ಯೋಜನೆ ಜಾರಿಗೆ ಹೆಚ್ಚುವರಿ ಅಕ್ಕಿ ಕೊಡಿ ಎಂದು ಕೇಳಿದರೇ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಹೀಗಾಗಿ ಒಂದೇ ದಿನದಲ್ಲಿ ಭತ್ತ ಬೆಳೆಯಲು ಆಗುತ್ತಾ..? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ದೇಶದಲ್ಲಿ ಆಹರ ಭದ್ರತಾ ಕಾಯ್ದೆ ಜಾರಿ ಮಾಡಿದ್ದು ಯುಪಿಎ ಸರ್ಕಾರ. ಈ ಹಿಂದೆ ಸಿದ್ಧರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದರು. ಈಗ ರಾಜ್ಯದ ಜನರಿಗೆ ತಲಾ 10ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದೇವೆ . ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನ ಅಕ್ಕಿ ಕೇಳುತ್ತಿದ್ದೇವೆ ಅಕ್ಕಿ ಕೊಡುತ್ತಿಲ್ಲ ಅಕ್ಕಿಕೊಡದಿದ್ದರೂ ಬೇರೆ ಕಡೆ ತಂದು ಕೊಡುತ್ತೇವೆ ಎಂದರು.
ನಾವು ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಜನರಿಗೆ ನಾವೇನು ಮಾತು ಕೊಟ್ಟಿದ್ದೇವೋ ಅದನ್ನ ಉಳಿಸಿಕೊಳ್ಳುತ್ತೆವೆ. ಒಂದು ಕಾಳು ಕಡಿಮೆಯಾದ್ರೂ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿಯವರು 365 ದಿನವೂ ಪ್ರತಿಭಟನೆ ಮಾಡಲಿ. ಬಿಜೆಪಿಯವರು ವಿಪಕ್ಷದಲ್ಲಿ ಕೂತಿರಬೇಕು ಹೋರಾಟ ಮಾಡುತ್ತಿರಬೇಕು ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದರು.
Key words: Center -not giving- rice-DCM- DK Shivakumar.