ಮೈಸೂರು,ಜು,17,2020(www.justkannada.in): ರೈಲ್ವೆ ಖಾಸಗೀಕರಣ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಮೈಸೂರಿನಲ್ಲಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ರೈಲ್ವೆ ನಿಲ್ದಾಣದ ಮುಂಭಾಗ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಇಡೀ ದೇಶದ ವ್ಯವಸ್ಥೆಯನ್ನ ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಖಾಸಗಿ ಕಪಿಮುಷ್ಠಿಗೆ ಸಿಲುಕಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಾರೆ. ಟಿಕೆಟ್ ದರದಲ್ಲಿ ಇಲಾಖೆ ನೀಡುತ್ತಿರವ ಸಬ್ಸಿಡಿಯಿಂದ ಜನ ವಂಚಿತರಾಗುತ್ತಾರೆ. ರೈಲ್ವೇ ಇಲಾಖೆ ನೌಕರರಿಗೆ ಕೆಲಸದ ಅಭದ್ರತೆ ಕಾಡಲಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಕೂಡಲೆ ಈ ನಿರ್ಧಾರ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Key words: Center – railway -privatization –decision-Protest – Mysore.